ಬಜ್ಪೆ: ಮುಹಿಯುದ್ದೀನ್ ಜಮಾ ಮಸ್ಜಿದ್ ಜಮಾಅತ್ ಬಜ್ಪೆ ಇದರ ವತಿಯಿಂದ ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಇಂದು ಎಂ ಜೆ ಎಂ ಸಮುದಾಯ ಭವನದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜೆ.ಎಂ ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಖಾದರ್ ರವರು ವಹಿಸಿದ್ದರು.
ಮಸೀದಿಯ ಖತೀಬರಾದ ಮನ್ಸೂರ್ ಸಹದಿ ದುವಾದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಮಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ ಹುಸೇನ್ ಸಿರಾಜ್, ಸದಸ್ಯರಾದ ರಫೀಕ್ ಇಂಜಿನಿಯರ್ , ಅಜ್ಮಲ್ ಅಲಿ, ಆಸಿಫ್ ರೋಷನ್, ಬಶೀರ್, ಅಬೂಬಕ್ಕರ್ ಹಾಗೂ ಯನೆಪೋಯ ಆಸ್ಪತ್ರೆಯ ಡಾಕ್ಟರ್ ಅಮರಶ್ರೀ ಸಿ.ಎ ಹಾಜರಿದ್ದರು. ಬಜ್ಪೆ ಪರಿಸರದ ನೂರಕ್ಕೂ ಮಿಕ್ಕ ಯುವಕರು ಈ ಶಿಬಿರದಲ್ಲಿ ರಕ್ತದಾನ ಮಾಡಿದರು.
ರಕ್ರದಾನ ಮಾಡಿದ ಎಲ್ಲರಿಗೂ ಎಂ.ಜೆ.ಎಂ ಆಡಳಿತ ಸಮಿತಿ ಧನ್ಯವಾದ ಸಲ್ಲಿಸಿದೆ.