janadhvani

Kannada Online News Paper

ನೈತಿಕ ಪೊಲೀಸ್ ಗಿರಿ: ಮಾಹಿತಿ ಸೋರಿಕೆ ಸಂಶಯದ ಬಗ್ಗೆ ಸರಕಾರದ ಗಮನಕ್ಕೆ- ಕೆ.ಅಶ್ರಫ್ ಮುಸ್ಲಿಮ್ ಒಕ್ಕೂಟ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಂಟಿ ಕಮ್ಯುನಲ್ ವಿಂಗ್ ಅಸ್ತಿತ್ವಕ್ಕೆ ಬಂದಿರುವುದು ಸ್ವಾಗತಾರ್ಹ

ಮಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ನೈತಿಕ ಪೊಲೀಸ್ ಗಿರಿ ಮತ್ತು ಗೋಸಾಗಾಟದ ಹಲ್ಲೆ ಸಂತ್ರಸ್ತರ ಮೊಬೈಲ್ ಸಂಖ್ಯೆಯ ಚಲನ ವಲನದ ಬಗ್ಗೆ ವ್ಯವಸ್ಥಿತವಾಗಿ ಟವರ್ ಲೊಕೇಶನ್ ಸ್ಥಿತಿಯ ನಿಖರ ಮಾಹಿತಿಯನ್ನು ನಿರ್ಧಿಷ್ಟ ಸಂಘಟನೆಗಳ ಹಲ್ಲೆಗಾರರರಿಗೆ ಘಟನೆ ಪೂರ್ವವಾಗಿ ಮಾಹಿತಿ ಸೋರಿಕೆ ಮಾಡಲಾಗುತಿತ್ತಾ ಎಂಬ ಬಗ್ಗೆ ಬಲವಾದ ಸಂಶಯ ಸೃಷ್ಟಿಯಾಗಿದೆ.

ಈ ಕಾರಣದಿಂದಲೇ ಹಿಂದಿನ ಸರಕಾರದ ಅವಧಿಯಲ್ಲಿ ವ್ಯಾಪಕ ನೈತಿಕ ಪೊಲೀಸ್ ಗಿರಿ ಮತ್ತು ಗೋಸಾಗಾಟ ಹಲ್ಲೆ ಮತ್ತು ಹತ್ಯೆಗಳು ಸಂಭವಿಸಿದ ಬಗ್ಗೆ ಬಲವಾದ ಸಂಶಯವಿರುವುದರಿಂದ ಈ ಬಗ್ಗೆ ತನಿಖೆ ನಡೆಸಲು ಸರಕಾರವನ್ನು ಒತ್ತಾಯ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ. ಅಶ್ರಫ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಂಟಿ ಕಮ್ಯುನಲ್ ವಿಂಗ್ ಅಸ್ತಿತ್ವಕ್ಕೆ ಬಂದದ್ದು ಸ್ವಾಗತಾರ್ಹ ಮತ್ತು ಈ ವಿಂಗ್ ಜಿಲ್ಲೆಯಲ್ಲಿ ಕಾರ್ಯಾರಂಭ ಗೊಂಡಿದ್ದು, ಈ ತಂಡ ಹಿಂದಿನ ಘಟನೆಗಳನ್ನು ಪರಿಶೀಲಿಸುವಾಗ ಟವರ್ ಲೊಕೇಶನ್ ಮಾಹಿತಿ ಸೋರಿಕೆಯ ಬಗ್ಗೆಯು ತನಿಖೆ ನಡೆಸಬೇಕಿದೆ ಎಂದು ಕೆ.ಅಶ್ರಫ್ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com