ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಅಧೀನದಲ್ಲಿ ಮೇ12 ಶುಕ್ರವಾರದಂದು ರಿಯಾದ್, ಶಿಫಾದಲ್ಲಿರುವ ರೀಮಾಸ್ ಆಡಿಟೋರಿಯಂ ನಲ್ಲಿ “ಅರಳುವ ಕನಸು ಉತ್ಸಾಹದ ಬೆಳಕು” ಎಂಬ ಘೋಷವಾಕ್ಯದಲ್ಲಿ ಪ್ರತಿಭೋತ್ಸವ-23 ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ 09:30ಕ್ಕೆ ನಡೆದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಚೇರ್ಮ್ಯಾನ್ ಅಬ್ದುಲ್ ರಝಾಕ್ ಮುಸ್ಲಿಯಾರ್ ಮುಡಿಪುರವರು ವಹಿಸಿದರು. ಹಂಝ ಮುಸ್ಲಿಯಾರ್ ಚೋಕಂಡಲ್ಲಿ ಉಸ್ತಾದರ ದುಆದೊಂದಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಇಲ್ಯಾಸ್ ಲತೀಫಿಯವರು ಖಿರಾಅತ್ ಪಠಿಸಿದರು. ಮುಹಮ್ಮದ್ ಸ್ವಾಲಿಹ್ ಜಮಾಲುಲ್ಲೈಲಿ ತಂಙಳ್ ಸಖಾಫಿ ಮಂಬುರಂ ಉದ್ಘಾಟನೆ ಮಾಡಿ, ರಿಯಾದ್ ಝೋನ್ ಅಧ್ಯಕ್ಷರಾದ ಮುಸ್ತಫಾ ಸಅದಿಯವರು ಶುಭಾಶಯ ಕೋರಿದರು.
ರಾಷ್ಟ್ರೀಯ ಸಮಿತಿ ನಾಯಕರಾದ ಸಿದ್ದೀಕ್ ಸಖಾಫಿ ಪೆರುವಾಯಿ, ಹನೀಫ್ ಕಣ್ಣೂರು, ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಕೋಶಾಧಿಕಾರಿ ನವಾಝ್ ಚಿಕ್ಕಮಗಳೂರು, ಸ್ವಾಗತ ಸಮಿತಿ ಕನ್ವೀನರ್ ದಾವೂದ್ ಸಅದಿ ಉರುವಾಲುಪದವು ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಶೀರ್ ತಲಪ್ಪಾಡಿಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಹಮೀದ್ ಮಠ ಸ್ವಾಗತಿಸಿ, ರಝಾಕ್ ಬಾರ್ಯ ಧನ್ಯವಾದಗೈದರು.
ನಂತರ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ಬತ್ತಾ, ಬದಿಯಾ, ಸನಯ್ಯಾ, ಗೊರ್ನಾತ, ಮುರೂಜ್ ಹಾಗೂ ರಬುವಾ ಸೆಕ್ಟರ್ ಗಳಿಂದ ವಿಜಯಿಗಳಾಗಿ ಬಂದ ಸರಿಸುಮಾರು 110ರಷ್ಟು ಸ್ಪರ್ಧಾರ್ಥಿಗಳು ವಿವಿದ ತರಹದ 34 ಸ್ಪರ್ಧೆಗಳಲ್ಲಿ ಭಾಗವಹಿಸಿದರು. ವಿಶಿಷ್ಟ ರೀತಿಯಲ್ಲಿ ನಡೆದ ಬುರ್ದಾ, ಕವಾಲಿ, ದಫ್ಫ್ ಹಾಗೂ ಚರ್ಚಾ ಸ್ಪರ್ಧೆಯೂ ಬಹಳ ಆಕರ್ಷಣಾ ರೂಪದಲ್ಲಿತ್ತು. 6 ಸೆಕ್ಟರ್ ಗಳ ಪೈಕಿ ಉತ್ತಮವಾದ ಪೈಪೋಟಿ ನಡೆದು ಕೊನೆಯಲ್ಲಿ ಗೊರ್ನಾತ ಸೆಕ್ಟರ್ ಚಾಂಪಿಯನ್ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಉದ್ಘಾಟನಾ ಸಮಾರಂಭದೊಂದಿದೆ ಆರಂಭಗೊಂಡ ಕಾರ್ಯಕ್ರಮವು ರಾತ್ರಿ 11:30ಕ್ಕೆ ಸಮಾಪ್ತಿಯಾಯಿತು.
ಸ್ಪರ್ಧಾ ಕಾರ್ಯಕ್ರಮದ ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಮುಸ್ತಫಾ ಸಅದಿ ಸೂರಿಕುಮೇರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಾಫಿಳ್ ಸಿನಾನ್ ಅಲ್ ಮದೀನಿ ಅಹ್ಸನಿ ಖಿರಾಅತ್ ಪಠಿಸಿ, ಸೌದಿ ರಾಷ್ಟ್ರೀಯ ನಾಯಕ ಸಿದ್ದೀಖ್ ಸಖಾಫಿ ಪೆರುವಾಯಿಯವರು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿ, ಸೌದಿ ರಾಷ್ಟ್ರೀಯ ಸಮಿತಿಯ ಸಂಘಟನೆ ಇಲಾಖೆಯ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಮುಹಮ್ಮದ್ ಕುಟ್ಟಿ ಸಖಾಫಿ
ಐಸಿಎಫ್ ರಿಯಾದ್ ಸೆಂಟ್ರಲ್ ಅಧ್ಯಕ್ಷರು, ಅಬ್ದುಲ್ ಅಝೀಝ್ ಬಜ್ಪೆ ಮುಂತಾದ ನಾಯಕರು ಮಾತನಾಡಿ ಶುಭ ಹಾರೈಸಿದರು.
ಸ್ವಾಗತ ಸಮಿತಿಯ ಚೇರ್ಮಾನ್ ಅಬ್ದುಲ್ ರಝಾಕ್ ಉಸ್ತಾದ್ ಮುಡಿಪು, ರಾಷ್ಟ್ರೀಯ ಸಮಿತಿ ನಾಯಕರಾದ ಬಷೀರ್ ತಲಪಾಡಿ, ಹನೀಫ್ ಕಣ್ಣೂರು, ಝೋನ್ ನಾಯಕ ಇಲ್ಯಾಸ್ ಲತೀಫೀ, ಫಾರೂಕ್ ಪಾಣೆಮಂಗಳೂರು, ಅಶ್ರಫ್ ಕೆಎಂಎಸ್, ಝಹೀರ್ ಉಳ್ಳಾಲ, ರಬುವ ಸೆಕ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ಒಕ್ಕೆತ್ತೂರು, ಗುರ್ನಾತ ಸೆಕ್ಟರ್ ಅಧ್ಯಕ್ಷರಾದ ಸ್ವಾಬಿರ್ ಹಾಜಿ ಉಪ್ಪಳ, ಮುರೂಜ್ ಸೆಕ್ಟರ್ ಅಧ್ಯಕ್ಷರಾದ ಜಮಾಲುದ್ದೀನ್ ಮಣಿಪುರ, ಸ್ವಾಗತ ಸಮಿತಿಯ ಕೋಶಾಧಿಕಾರಿ ಹಮೀದ್ ಮಠ ಮುಂತಾದ ನಾಯಕರು ವೇದಿಯಲ್ಲಿ ಉಪಸ್ಥಿತರಿದ್ದರು.
ಹನೀಫ್ NS ರವರು ನಿರೂಪಣೆ ಮಾಡಿದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಕನ್ವೀನರ್ PK ದಾವೂದ್ ಸಅದಿ ಉರುವಾಲು ಸ್ವಾಗತಿಸಿ ಝೋನ್ ಕೋಶಾಧಿಕಾರಿ ನವಾಝ್ ಚಿಕ್ಕಮಗಳೂರು ಧನ್ಯವಾದ ಹೆಳಿದರು.