ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ದಮ್ಮಾಮ್ ವಲಯ ಅಧೀನದ ತುಕ್ಬಾ ಘಟಕದ 28 ನೇ ವಾರ್ಷಿಕ ಮಹಾಸಭೆ 16, ಫೆಬ್ರವರಿ 2023 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ 10 ಘಂಟೆಗೆ ಸರಿಯಾಗಿ ಜರಗಿತು. ಡಿಕೆಯಸ್ಸಿ ಖಾದಿಮ್ ಇಸ್ಮಾಯೀಲ್ ಕಾಟಿಪಳ್ಳ ದುಆ ನಸೀಹತ್ ಗೈದರು.
ಡಿಕೆಯಸ್ಸಿ ತುಕ್ಬಾ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮೂಳೂರು ಅಲ್ ಇಹ್ಸಾನ್ ಹಳೆ ವಿದ್ಯಾರ್ಥಿ ಮುರ್ಷಿದ್ ಅಹ್ಮದ್ ಉಚ್ಚಿಲ ಖಿರಾಅತ್ ಪಠಿಸಿದರು.
ಡಿಕೆಯಸ್ಸಿ ದಮ್ಮಾಮ್ ಘಟಕದ ಅಧ್ಯಕ್ಷ ಸಯ್ಯದ್ ಬಾವ ಬಜ್ಪೆ ಸಭೆಯನ್ನು ಉದ್ಘಾಟಿಸಿದರು. ತುಕ್ಬಾ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಉಚ್ಚಿಲ ಸ್ವಾಗತಿಸಿದರು. ಕೋಶಾಧಿಕಾರಿ ಅಬ್ದುರ್ರಹ್ಮಾನ್ ಉಚ್ಚಿಲ ರವರ ಉಪಸ್ಥಿತಿಯಲ್ಲಿ ಪ್ರವರ್ತನಾ ವರದಿ ಮಂಡಿಸಲಾಯಿತು.
ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮೂಳೂರು ರವರು ಮಾತನಾಡಿ ಮುಂದಿನ ಸಮಯಗಳಲ್ಲಿ ಹೆಚ್ಚಿನ ಸಮಯ ಡಿಕೆಯಸ್ಸಿ ಯ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಿರಿ. ಎಂದು ನುಡಿದರು.
ಡಿಕೆಯಸ್ಸಿ ದಮ್ಮಾಮ್ ವಲಯದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ರವರ ಉಸ್ತುವಾರಿಯಲ್ಲಿ 2023-24 ನೇ ಸಾಲಿಗೆ ನೂತನ ಸಮಿತಿ ರಚಸಲಾಯಿತು.
ಗೌರವ ಅಧ್ಯಕ್ಷರಾಗಿ ಡಾಕ್ಟರ್ ಮುಹಮ್ಮದ್ ಷರೀಫ್ ಮೂಳೂರು, ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮೂಳೂರು, ಪ್ರಧಾನ ಕಾರ್ಯದರ್ಶಿ ಯಾಗಿ ಮುರ್ಷಿದ್ ಅಹ್ಮದ್ ಉಚ್ಚಿಲ ಹಾಗೂ ಕೋಶಾಧಿಕಾರಿ ಯಾಗಿ ಅಸ್ಲಮ್ ಶಿರ್ವ ರವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಅಸೀಬುರ್ರಹ್ಮಾನ್ ಮತ್ತು ಶಂಸುದ್ದೀನ್ ಮೊಯಿದಿನ್, ಜೊತೆ ಕಾರ್ಯದರ್ಶಿಗಳಾಗಿ ಸರ್ಫ್ರಾಝ್ ಮೂಳೂರು ಮತ್ತು ಶಂಸೀರ್ ಉಚ್ಚಿಲ, ಸಲಹಾ ಸಮಿತಿಗೆ ಎನ್. ಎಸ್. ಅಬ್ದುಲ್ಲಾ ಮತ್ತು ಅಬ್ದುಲ್ ಹಮೀದ್ ಉಚ್ಚಿಲ, ಸಂಚಾಲಕರಾಗಿ ರಿಯಾಝ್ ಮಣಿಪುರ ಮತ್ತು ಅಬ್ದುರ್ರಹ್ಮಾನ್ ಉಚ್ಚಿಲ ರವರನ್ನು ನೇಮಕ ಗೊಳಿಸಲಾಯಿತು.
ಉಳಿದ ಹತ್ತು ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ತುಕ್ಬಾ ಘಟಕದ ಉಸ್ತುವಾರಿ ಅಬ್ದುಲ್ ಅಝೀಝ್ ಮೂಡುತೋಟ, ಎನ್. ಎಸ್. ಅಬ್ದುಲ್ಲಾ ಮತ್ತು ಅಲ್ ಖೋಬರ್ ನಿಂದ ಅಬ್ದುಲ್ ಹಮೀದ್ ಸುಳ್ಯ ಆಗಮಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಗೌರವ ಅಧ್ಯಕ್ಷರಾದ ಡಾಕ್ಟರ್ ಮುಹಮ್ಮದ್ ಷರೀಫ್ ಮೂಳೂರು ಮಾತನಾಡಿ ಡಿಕೆಯಸ್ಸಿ ಯು ಹಮ್ಮಿಕೊಂಡ ಯೋಜನೆಗಳನ್ನು ಸಂಪೂರ್ಣ ಗೊಳಿಸುವಲ್ಲಿ ತಾವುಗಳೆಲ್ಲರ ಸಹಾಯ ಸಹಕಾರ ಅಗತ್ಯವಿದ್ದು ಯಶಸ್ವಿಗೊಳಿಸುವಲ್ಲಿ ಸಹಕರಿಸಿರಿ ಎಂದು ನುಡಿದರು.
ಸಭೆಯ ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಮುರ್ಷಿದ್ ಅಹ್ಮದ್ ಉಚ್ಚಿಲ ಧನ್ಯವಾದಗೈದರು.
ವರದಿ: ಇಸ್ಮಾಯೀಲ್ ಕಾಟಿಪಳ್ಳ ದಮ್ಮಾಂ