janadhvani

Kannada Online News Paper

ಸೌದಿ: ಬಸ್ ಪ್ರಯಾಣಿಕರ ಲಗೇಜ್‌ನಲ್ಲಿ ಹೆಸರು ಸಹಿತ ಪೂರ್ಣ ಮಾಹಿತಿಯನ್ನು ಲಗತ್ತಿಸಿರಬೇಕು

ಈ ಕ್ರಮವು ಗಡಿಯಲ್ಲಿನ ಕಸ್ಟಮ್ಸ್ ಕಾರ್ಯವಿಧಾನಗಳನ್ನು ಸರಾಗಗೊಳಿಸುವ ಭಾಗವಾಗಿದೆ.

ಜಿದ್ದಾ: ಬಸ್ ಮೂಲಕ ಸೌದಿ ಅರೇಬಿಯಾಕ್ಕೆ ತೆರಳುವ ಪ್ರಯಾಣಿಕರು ತಮ್ಮ ಲಗೇಜ್ ಮೇಲೆ ತಮ್ಮ ಹೆಸರನ್ನು ಬರೆಯುವಂತೆ ಸೂಚಿಸಲಾಗಿದೆ. ಈ ಸಂಬಂಧ ಸಾರಿಗೆ ಸಂಸ್ಥೆಗಳಿಗೆ (Transportation Agency’s) ಅಧಿಕಾರಿಗಳು ನೋಟಿಸ್ ನೀಡಲು ಆರಂಭಿಸಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಭೂ ಗಡಿಯ(Land Border) ಮೂಲಕ ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ಮತ್ತು ಹಿಂದಿರುಗುವ ಬಸ್ ಪ್ರಯಾಣಿಕರು ತಮ್ಮ ಲಗೇಜ್‌ನಲ್ಲಿ ಪ್ರಯಾಣಿಕರ ಹೆಸರು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕು. ಈ ನಿಟ್ಟಿನಲ್ಲಿ ಸಾರಿಗೆ ಸೇವೆಗಳನ್ನು ಒದಗಿಸುವ ಸಾರಿಗೆ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ಸೌದಿ ಚೇಂಬರ್ ಆಫ್ ಕಾಮರ್ಸ್( Saudi Chamber of Commerce) ವಿಭಾಗಕ್ಕೆ ಸೂಚಿಸಲಾಗಿದೆ.

ಈ ಕ್ರಮವು ಗಡಿಯಲ್ಲಿನ ಕಸ್ಟಮ್ಸ್ ಕಾರ್ಯವಿಧಾನಗಳನ್ನು ಸರಾಗಗೊಳಿಸುವ ಭಾಗವಾಗಿದೆ. ಝಕಾತ್, ತೆರಿಗೆ ಮತ್ತು ಕಸ್ಟಮ್ಸ್ ಪ್ರಾಧಿಕಾರವು ಪಾಸ್‌ಪೋರ್ಟ್(Jawazat) ವಿಭಾಗದ ಸಹಯೋಗದೊಂದಿಗೆ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಬಸ್‌ನಲ್ಲಿ ಬರುವ ಪ್ರಯಾಣಿಕರನ್ನು ಗಡಿ ಚೆಕ್ ಪಾಯಿಂಟ್‌ಗಳಲ್ಲಿ ವಿಶೇಷ ಸುಸಜ್ಜಿತ ಸಭಾಂಗಣದಲ್ಲಿ ಸ್ವಾಗತಿಸಲಾಗುತ್ತದೆ.

ಇಲ್ಲಿ, ಪ್ರಯಾಣದ ದಾಖಲೆಗಳು ಮತ್ತು ಸಾಮಾನುಗಳನ್ನು ಪರಿಶೀಲಿಸಿದ ನಂತರವೇ ಪ್ರಯಾಣವನ್ನು ಮುಂದುವರಿಸಲು ಅನುಮತಿಸಲಾಗುತ್ತದೆ. ಕಳ್ಳಸಾಗಣೆ ಗ್ಯಾಂಗ್‌ಗಳ ದುರ್ಬಳಕೆಯನ್ನು ತಪ್ಪಿಸಲು ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಸಂಪೂರ್ಣವಾಗಿ ಭದ್ರಪಡಿಸಿಕೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

error: Content is protected !! Not allowed copy content from janadhvani.com