janadhvani

Kannada Online News Paper

ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟು- ಫ್ರೀಡಂ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟು ಹಾಗೂ ಎಸ್.ಬಿ.ಎಸ್ ದಾರುಸ್ಸಲಾಂ ಮದ್ರಸ ಕುಂಡದಬೆಟ್ಟು ಇದರ ವತಿಯಿಂದ ಫ್ರೀಡಂ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕುಂಡದಬೆಟ್ಟುವಿನಲ್ಲಿ ನಡೆಯಿತು.

ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡಬಿದಿರೆಯ ಶಿಕ್ಷಕರಾದ ರಾಜೇಂದ್ರ ಕುಂಡದಬೆಟ್ಟು ಫ್ರೀಡಂ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ ಬಾಯಿ ಮಾತಿನ ಸೌಹಾರ್ದತೆ ಸಾಲದು, ಸ್ವಾತಂತ್ರ್ಯ ಕಳೆದು 75 ವರ್ಷಗಳು ಕಳೆದರೂ ಕೂಡ, ಗಾಂಧೀಜಿಯವರು ಕಂಡ ಕನಸು ಇನ್ನೂ ಕೂಡ ನನಸಾಗಿಲ್ಲ,

ಹೆಣ್ಣೊಬ್ಬಳು ರಾತ್ರಿ12 ವೇಳೆ ರಸ್ತೆಯಲ್ಲಿ ನಡೆದಾಡುವ ಸಮಯ ಆಗಮಿಸಿದರೆ ದೇಶವನ್ನು ರಾಮರಾಜ್ಯ ವೆನ್ನಬಹುದು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗಂಡಸರು ಕೂಡಾ ಸಂಜೆ 6ಗಂಟೆಯ ಬಳಿಕ ಮನೆಯಿಂದ ಹೊರ ಹೋದರೆ ತಿರುಗಿ ಮನೆಗೆ ಬರುವರೆಂಬುದನ್ನು ಹೇಳಲು ಅಸಾಧ್ಯ. ಅಂತಹದರಲ್ಲಿ ನಮ್ಮ ಊರಿನ ಜನರು ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದು, ಇನ್ನೂ ಕೂಡ ನಮ್ಮ ಸೌಹಾರ್ದತೆ ಮುಂದುವರೆಸುವಂತೆ ಯುವಕರಿಗೆ ಕರೆ ನೀಡಿದರು.

ಕುಕ್ಕೇಡಿ ನಿಟ್ಟಡೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ದನ ಪೂಜಾರಿ ಅವರು ಧ್ವಜಾರೋಹಣಗೈದರು. MJM ಕುಂಡದಬೆಟ್ಟು ಖತೀಬರಾದ ಕೆ.ಎಂ.ಹನೀಫ್ ಸಖಾಫಿ ಸ್ವಾತಂತ್ರ್ಯ ಸಂದೇಶ ನೀಡಿದರು.

ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ Dr.ಶಾಂತಿಪ್ರಸಾದ್, ನಿವೃತ್ತ ಎಎಸ್ಐ KH ಯೂಸುಫ್ ಕುಂಡದಬೆಟ್ಟು,ನಿವೃತ್ತ ಶಿಕ್ಷಕರಾದ ಉದಯಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾ‌ನ ಸ್ವೀಕರಿಸಿ Dr.ಶಾಂತಿಪ್ರಸಾದ್ ಮಾತನಾಡಿ, ಭಾರತ ವೈವಿಧ್ಯತೆ ಯಿಂದ ಕೂಡಿದ ದೇಶವಾಗಿದ್ದು, ಜನರಲ್ಲಿನ ಸೌಹಾರ್ದತೆಯ ಕುರಿತು ಹಾಗೂ ದೇಶದಲ್ಲಿನ ಮುಸ್ಲಿಮರ ಪರೋಪಕಾರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಿವೃತ್ತ ಎಎಸ್ಐ KH ಯೂಸುಫ್ ಕುಂಡದಬೆಟ್ಟು ಅವರು ಮಾತನಾಡಿದರು.

ಈ ವೇಳೆ DSM ಕುಂಡದಬೆಟ್ಟು ಅಧ್ಯಾಪಕರುಗಳಾದ ಹಾರಿಸ್ ಸಖಾಫಿ,ಅಬ್ದುಲ್ ಹಮೀದ್ ಮುಸ್ಲಿಯಾರ್, SMA ವೇಣೂರು ರೀಜನಲ್ ಅಧ್ಯಕ್ಷ ಇಸ್ಲಾಯಿಲ್ KY, ಅಶ್ರಫ್ ಅಸರ್, ಹನೀಫ್ G, ಹೈದರ್ ಅಮೈ, ಅಬೂಬಕ್ಕರ್ ಹಂದೇವು ಮತ್ತಿತರರು ಉಪಸ್ಥಿತರಿದ್ದರು. SBS ದಾರುಸ್ಸಲಾಂ ಮದ್ರಸ ಕುಂಡದಬೆಟ್ಟು ಜೊತೆ ಕಾರ್ಯದರ್ಶಿ ಸವಾದ್ ಪಾಣೂರು ಸ್ವಾಗತಿಸಿದರು.
ವರದಿ : ಹಕೀಂ ಬೋಳಾರ್

error: Content is protected !! Not allowed copy content from janadhvani.com