ರಿಯಾದ್: ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು 48 ಗಂಟೆಗಳ ಒಳಗೆ ಪಡೆದ ಕೋವಿಡ್ ನೆಗೆಟಿವ್ ಫಲಿತಾಂಶ ಕಡ್ಡಾಯ. ವಿದೇಶಿಯರು ಮತ್ತು ಸೌದಿ ಪ್ರಜೆಗಳು ಪಿಸಿಆರ್ ನೆಗೆಟಿವ್ ಪ್ರಮಾಣಪತ್ರದೊಂದಿಗೆ ದೇಶಕ್ಕೆ ಪ್ರವೇಶಿಸಬೇಕು ಎಂದು ಆಂತರಿಕ ಸಚಿವಾಲಯ ಹೇಳಿದೆ. ಈ ನಿಬಂಧನೆಯು ಮುಂದಿನ ಬುಧವಾರ (ಫೆಬ್ರವರಿ 9) ಅರ್ಧರಾತ್ರಿ 1 ಗಂಟೆಗೆ ಜಾರಿಗೆ ಬರಲಿದೆ.
ಕೋವಿಡ್ ಲಸಿಕೆಯ ಎರಡು ಡೋಸ್ ತೆಗೆದುಕೊಂಡ ಮೂರು ತಿಂಗಳ ನಂತರ 16 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಸೌದಿ ನಾಗರಿಕರಿಗೆ ದೇಶವನ್ನು ತೊರೆಯಲು ಬೂಸ್ಟರ್ ಡೋಸ್ ಕಡ್ಡಾಯವಾಗಿದೆ. ಅದೂ ಕೂಡ ಬುಧವಾರದಿಂದಲೇ ಜಾರಿಗೆ ಬರಲಿದೆ.
ಸೌದಿಗೆ ಹಿಂದಿರುಗುವವರು 48 ಗಂಟೆಗಳ ಒಳಗೆ ಪಡೆದ ಕೋವಿಡ್ ಆನ್ಟಿಜೆನ್ ಪರೀಕ್ಷೆಯ ನೆಗಟಿವ್ ಫಲಿತಾಂಶವನ್ನು ವಿಮಾನ ನಿಲ್ದಾಣದಲ್ಲಿ ಹಾಜರುಪಡಿಸಬೇಕು. ಎಂಟು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಪರೀಕ್ಷಾ ಫಲಿತಾಂಶದ ಅಗತ್ಯವಿಲ್ಲ