ರಿಯಾದ್ : ಸೌದಿ ಅರೇಬಿಯಾದಲ್ಲಿ ಇಕಾಮಾ ಮತ್ತು ಮರು-ಪ್ರವೇಶ ಅವಧಿಯ ಉಚಿತ ವಿಸ್ತರಣೆಯ ಪ್ರಯೋಜನವು ಭಾರತೀಯ ವಲಸಿಗರಿಗೂ ಲಭಿಸಲಿದೆ. ಡಿಸೆಂಬರ್ 1 ರಿಂದ ಭಾರತಕ್ಕೆ ನೇರ ವಿಮಾನಯಾನವನ್ನು ಪ್ರಾರಂಭಿಸುವ ಹಿನ್ನೆಲೆಯಲ್ಲಿ ಉಚಿತ ವಿಸ್ತರಣೆಯ ಪ್ರಯೋಜನ ಲಭಿಸುವ ಬಗ್ಗೆ ವಲಸಿಗರಲ್ಲಿ ಕಳವಳವಿತ್ತು.
ಜವಾಸಾತ್ ನಿರ್ದೇಶನಾಲಯದ ಪ್ರಕಾರ, ಭಾರತ ಸೇರಿದಂತೆ ಬ್ರೆಜಿಲ್, ಇಂಡೋನೇಷಿಯಾ, ಪಾಕಿಸ್ತಾನ, ಟರ್ಕಿ, ಲೆಬನಾನ್, ಈಜಿಪ್ಟ್, ಇಥಿಯೋಪಿಯಾ, ವಿಯೆಟ್ನಾಂ, ಅಫ್ಘಾನಿಸ್ತಾನ್, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ, ಮೊಜಾಂಬಿಕ್, ಬೋಟ್ಸ್ವಾನಾ, ಲಿಸೊಥೊ ಮತ್ತು ಇಸ್ವಾಟಿನಿ ಮುಂತಾದ 17 ದೇಶಗಳ ಜನರು ಇಕಾಮಾ ಮತ್ತು ಮರು ಪ್ರವೇಶ ಅವಧಿಯ ಉಚಿತ ವಿಸ್ತರಣೆಯ ಪ್ರಯೋಜನವನ್ನು ಪಡೆಯಲಿದ್ದಾರೆ.
ಸೌದಿ ಅರೇಬಿಯಾ ಭಾರತ ಸೇರಿದಂತೆ ಹಲವಾರು ದೇಶಗಳ ಮೇಲಿನ ತನ್ನ ಪ್ರಯಾಣದ ನಿಷೇಧವನ್ನು ತೆಗೆದುಹಾಕಿದೆ ಎಂದು ಘೋಷಿಸಿದೆ, ಆದರೂ ಮತ್ತೊಮ್ಮೆ ಉಚಿತ ವಿಸ್ತರಣೆಯ ಪ್ರಯೋಜನ ಲಭಿಸಲಿದೆ.