ರಿಯಾದ್: ಮದೀನಾ ಮಸೀದಿಯಲ್ಲಿ ಪ್ರಾರ್ಥನೆ ನಿರ್ವಹಿಸಲು ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಕೋವಿಡ್ ನಿರ್ಬಂಧಗಳ ಭಾಗವಾಗಿ ಮದೀನಾದ ಮಸ್ಜಿದ್ ಅನ್ನಬವಿಯಲ್ಲಿ ಪ್ರಾರ್ಥನೆ ಮಾಡಲು ಮುಂಚಿತವಾಗಿ ಕಾಯ್ದಿರಿಸುವ ಮತ್ತು ‘ಇಅ್ ತಮರ್ನಾ’ ಆಪ್ ಮೂಲಕ ಪರವಾನಗಿ ಪಡೆಯುವ ಅಗತ್ಯವನ್ನು ಮನ್ನಾ ಮಾಡಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯವು ಘೋಷಿಸಿದೆ.
ಮಸೀದಿ ಪ್ರವೇಶಿಸಲು, ‘ತವಕ್ಕಲ್ನಾ’ ಆಪ್ ಅನ್ನು ಪ್ರದರ್ಶಿಸುವುದು ಕಡ್ಡಾಯ.ಆ್ಯಪ್‌ನ ಆರೋಗ್ಯ ಸ್ಥಿತಿಯು ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರು, ಒಂದು ಡೋಸ್ ಪಡೆದು 14 ದಿನಗಳನ್ನು ಪೂರ್ಣಗೊಳಿಸಿದವರು, ರೋಗ ಮುಕ್ತರಾಗಿ ರೋಗ ನಿರೋಧಕ ಶಕ್ತಿಯನ್ನು ಗಳಿಸಿದವರು ಇವುಗಳಲ್ಲಿ ಯಾವುದಾದರೂ ಒಂದಾಗಿರಬೇಕು.
ಮಸೀದಿಯಲ್ಲಿ ಐದು ಹೊತ್ತಿನ ಕಡ್ಡಾಯ ಪ್ರಾರ್ಥನೆಗಳಿಗೆ ಹಾಜರಾಗಲು ಮುಂಚಿತವಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ. ಆದಾಗ್ಯೂ, ಮಸೀದಿಯಲ್ಲಿ ಪ್ರವಾದಿಯವರ ರೌಳಾ ಶರೀಫ್ ನಲ್ಲಿ ಪ್ರಾರ್ಥನೆ ಮಾಡಲು ಮತ್ತು ಪ್ರವಾದಿ ರೌಳಾ ಸಂದರ್ಶನಕ್ಕೆ ‘ಇಅ್ತಮರ್ನಾ’ ಆಪ್ ಮೂಲಕ ಪರವಾನಗಿ ಪಡೆಯಬೇಕು. ಲಭ್ಯವಿರುವ ಸಮಯಕ್ಕೆ ಅನುಗುಣವಾಗಿ ಪೂರ್ವಾನುಮತಿ ಪಡೆಯಲು ‘ಇಅ್ತಮರ್ನಾ’ ಆಪ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿದೆ.