ಮಂಜನಾಡಿ:ಯುಎಇಯಲ್ಲಿ ಕಾರ್ಯಾಚರಿಸಿ, ಇದೀಗ ಕೆಲಸ ತೊರೆದು ಊರಿನಲ್ಲಿರುವ ಹಾಗೂ ಲಾಕ್ ಡೌನಾಗಿ ಊರಿನಲ್ಲಿ ಸಿಲುಕಿರುವ ಕೆಸಿಎಫ್ ನ ಕಾರ್ಯಕರ್ತರ ಸ್ನೇಹ ಸಮ್ಮಿಲನವು ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿಯಲ್ಲಿ ಜುಲೈ 23 ಶುಕ್ರವಾರ ನಡೆಯಿತು.
ಕಳೆದ ಎಂಟು ವರ್ಷಗಳಿಂದ ಕೊಲ್ಲಿ ಹಾಗೂ ಲಂಡನ್ ಮಲೇಶಿಯಾದಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಸಂಘಟನೆಯಾಗಿದೆ ಕೆಸಿಎಫ್.
ಕಾರ್ಯಕ್ರಮ ಮರ್ಹೂಮ್ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಖಬರ್ ಝಿಯಾರತಿನೊಂದಿಗೆ ಆರಂಭಗೊಂಡಿತು. ಅಲ್ ಮದೀನಾ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ರವರು ಝಿಯಾರತಿಗೆ ನೇತೃತ್ವ ನೀಡಿದರು, ಕಾರ್ಯಕ್ರಮದಲ್ಲಿ ಕೆಸಿಎಫ್ ದುಬೈ ನಾರ್ತ್ ಮಾಜಿ ಅಧ್ಯಕ್ಷರಾದ ಅಬ್ದುಲ್ಲ ಉಸ್ತಾದ್ ಕುಡ್ತಮುಗೇರು ರವರು ದುಆ ನೆರವರಿಸಿದರು.
ಅಧ್ಯಕ್ಸತೆಯನ್ನು ಕೆಸಿಎಫ್ ಯುಎಇ ರಾಷ್ಟ್ರಿಯ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ಬ್ರೆಟ್ ಮಾರ್ಬ್ಬಲ್ ರವರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಶೇಖ್ ಭಾವ ಹಾಜಿ ಮಂಗಳೂರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೆಸಿಎಫ್ ದುಬೈ ಮಾಜಿ ಅಧ್ಯಕ್ಷರಾದ ಮೆಹಬೂಬ್ ರಹ್ಮಾನ್ ಸಖಾಫಿ ಕಿನ್ಯ ರವರು ಮುಖ್ಯ ಭಾಷಣ ಮಾಡಿದರು ಕಾರ್ಯಕ್ರಮದಲ್ಲಿ ಅಲ್ ಮದೀನಾ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ,ಕೆಸಿಎಫ್ ಯುಎಇ ರಾಷ್ಟ್ರಿಯ ಸಮಿತಿ ಇಹ್ಶಾನ್ ವಿಭಾಗ ಅಧ್ಯಕ್ಸರಾದ ಅಬ್ದುಲ್ ಖಾದರ್ ಸಅದಿ ಸುಳ್ಯ ,ಹುಸೈನ್ ಹಾಜಿ ಕಿನ್ಯ ,ಇಬ್ರಾಹಿಂ ಹಾಜಿ ಕೊಲ್ನಾಡು ,ನಝಿರ್ ಹಾಜಿ ಕೆಮ್ಮಾರ,ಇಬ್ರಾಹಿಂ ಹಾಜಿ ಕಿನ್ಯ ಶುಭಹಾರೈಸಿದರು.
ಅಬೂಸ್ವಾಲಿಹ್ ಸಖಾಫಿ ಶಾರ್ಜ,ಇಸ್ಮಾಯಿಲ್ ಮದನಿ ನಗರ,ಅಕ್ರಂ ಬಿಸಿರೋಡು,ಹನೀಫ್ ಬಸರಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಕೆಸಿಎಫ್ ಯುಎಇ ರಾಷ್ಟ್ರಿರ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಖಲಂದರ್ ಕಬಕ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮವು ಮರ್ಹೂಂ ಶೈಖುನಾ ತಾಜುಲ್ ಪುಕಹಾ ಬೇಕಲ್ ಉಸ್ತಾದರ ಖಬರ್ ಝಿಯಾರತಿನೊಂದಿಗೆ ಕೊನೆಗೊಳಿಸಲಾಯಿತು.