janadhvani

Kannada Online News Paper

ಇಖಾಮಾ ಮತ್ತು ರೀ ಎಂಟ್ರಿ ವಿಸಾ ಆಗಸ್ಟ್ 31 ರ ವರೆಗೆ ವಿಸ್ತರಣೆ – ಸೌದಿ ದೊರೆ ಘೋಷಣೆ

ರಿಯಾದ್, ಜು.21: ಸೌದಿ ಅರೇಬಿಯಾಕ್ಕೆ ಪ್ರಯಾಣ ನಿಷೇಧವಿರುವ ದೇಶಗಳಲ್ಲಿ ಸೌದಿಗೆ ಮರಳಲು ಸಾಧ್ಯವಾಗದೆ ಉಳಿದಿರುವವರ ಇಕಾಮಾ ಮತ್ತು ರೀ ಎಂಟ್ರಿ ವೀಸಾ ಮಾನ್ಯತೆಯನ್ನು ಆಗಸ್ಟ್ 31ರ ವರೆಗೆ ಉಚಿತವಾಗಿ ವಿಸ್ತರಿಸಲಾಗುವುದು. ಸೌದಿ ಅರೇಬಿಯಾದ ದೊರೆ ರಾಜ ಸಲ್ಮಾನ್ ಈ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ, ಇಕಾಮಾ, ವಿಸಿಟ್ ವೀಸಾ ಮತ್ತು ವಲಸಿಗರ ಕೆಲಸದ ವೀಸಾಗಳನ್ನು ಜುಲೈ ಅಂತ್ಯದವರೆಗೆ ಉಚಿತವಾಗಿ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ವಿಸ್ತರಿಸಲಾಗಿದ್ದು, ವಿಮಾನ ಸೇವೆಯು ಪುನರಾರಂಭ ವಿಳಂಬವಾಗುವ ಸೂಚನೆಯಾಗಿದೆ.ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ನಡೆದಿಲ್ಲ. ಜವಾಝಾತ್ ವಿಭಾಗವು ಇಖಾಮಾ ಮತ್ತು ವೀಸಾ ಅವಧಿಯನ್ನು ಸ್ವಯಂಚಾಲಿತವಾಗಿ ವಿಸ್ತರಿಸಲಿದೆ.

error: Content is protected !! Not allowed copy content from janadhvani.com