ಮಕ್ಕಾ: ಪರವಾನಗಿ ಇಲ್ಲದವರಿಗೆ ಪವಿತ್ರ ಹರಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ಹಜ್ ನ ಪವಿತ್ರ ಕರ್ಮಗಳು ನಡೆಯುವ ಮಕ್ಕಾ, ಮಿನಾ, ಮುಸ್ದಾಲಿಫಾ ಮತ್ತು ಅರಫಾತ್‌ನಲ್ಲಿ ಪ್ರವೇಶಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸೌದಿ ಆಂತರಿಕ ಸಚಿವಾಲಯ ಪ್ರಕಟಿಸಿದೆ.
ಜುಲೈ 5 ರಿಂದ 23 ರವರೆಗೆ ಪರವಾನಗಿ ರಹಿತ, ಅಕ್ರಮವಾಗಿ ಮಕ್ಕಾ ಸೇರಿದಂತೆ ಪವಿತ್ರ ಯಾತ್ರಾ ಸ್ಥಳಗಳಿಗೆ ಪ್ರವೇಶಿಸುವವರಿಗೆ 10,000 ರಿಯಾಲ್ ದಂಡ ವಿಧಿಸಲಾಗುವುದು. ಪುನರಾವರ್ತಿತ ಅಪರಾಧಗಳಿಗೆ ದಂಡವನ್ನುದ್ವಿಗುಣಗೊಳಿಸಲಾಗುತ್ತದೆ.
ಕರೋನಾ ವೈರಸ್ ವಿರುದ್ಧ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಷರತ್ತುಗಳು ಮತ್ತು ದಂಡಗಳ ಆಧಾರದ ಮೇಲೆ ತಡೆಗಟ್ಟುವ ಕ್ರಮಗಳನ್ನು ಉಲ್ಲಂಘಿಸುವವರಿಗೆ ಶಿಕ್ಷೆ ನೀಡಲಾಗುವುದು. ಈ ವರ್ಷದ ಹಜ್ ಋತುವಿನಲ್ಲಿ ರೋಗ ಹರಡುವುದನ್ನು ತಡೆಗಟ್ಟಲು ಅನುಮೋದಿತ ಪ್ರೋಟೋಕಾಲ್ಗಳ ಅನುಷ್ಠಾನವನ್ನು ಖಚಿತಪಡಿಸುವುದಾಗಿ ಸಚಿವಾಲಯ ಹೇಳಿದೆ.
ಹಜ್ ತೀರ್ಥಯಾತ್ರೆಯಲ್ಲಿ ಎಲ್ಲಾ ಸೌದಿ ಪ್ರಜೆಗಳು ಮತ್ತು ವಲಸಿಗರು ಸೂಚನೆಗಳನ್ನು ಪಾಲಿಸುವಂತೆ ಸಚಿವಾಲಯ ಕರೆ ನೀಡಿದೆ. ಏತನ್ಮಧ್ಯೆ, ಹರಮ್ ಮಸೀದಿ ಮತ್ತು ಹಜ್ ನಡೆಯುವ ಇತರ ಪವಿತ್ರ ಸ್ಥಳಗಳಿಗೆ ಹೋಗುವ ಎಲ್ಲಾ ರಸ್ತೆಗಳು ಮತ್ತು ಕಾರಿಡಾರ್‌ಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸುತ್ತಿದ್ದು,ಕಾನೂನು ಉಲ್ಲಂಘಿಸುವವರನ್ನು ಭದ್ರತಾ ಸಿಬ್ಬಂದಿ ತಡೆದು ದಂಡ ವಿಧಿಸುತ್ತಾರೆ ಎಂದು ಸಚಿವಾಲಯ ತಿಳಿಸಿದೆ.