ರಿಯಾದ್: ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾಕ್ಕೆ ಪ್ರವೇಶ ನಿರ್ಬಂಧಿಸಲ್ಪಟ್ಟಿರುವ ದೇಶಗಳಿಂದ ಸೌದಿಗೆ ಮರಳಲು ಸಾಧ್ಯವಾಗದೆ ಸ್ವದೇಶದಲ್ಲಿ ಉಳಿದಿರುವ ಕಾರ್ಮಿಕರ ಇಕಾಮಾ,ರೀ ಎಂಟ್ರಿ ವಿಸಾವನ್ನು ಜುಲೈ 31ರ ವರೆಗೆ ಉಚಿತವಾಗಿ ವಿಸ್ತರಿಸಲಾಗುವುದು.
ಸೌದಿ ಅರೇಬಿಯಾದ ದೊರೆ ರಾಜ ಸಲ್ಮಾನ್ ಅವರ ಆದೇಶದಂತೆ, ಇಖಾಮಾ, ಮರು ಪ್ರವೇಶ ಮತ್ತು ಭೇಟಿ ವೀಸಾವನ್ನು ಜೂನ್ 2, 2021 ರವರೆಗೆ ಉಚಿತವಾಗಿ ವಿಸ್ತರಿಸಲಾಗಿತ್ತು. ಇದೀಗ ಜುಲೈ 31ರ ವರೆಗೆ ವಿಸ್ತರಿಸುವಂತೆ ದೊರೆ ಆದೇಶ ನೀಡಿದ್ದಾರೆ.
ಭೇಟಿ ವೀಸಾವನ್ನು ಉಚಿತವಾಗಿ ವಿಸ್ತರಿಸಲಾಗುವುದು. ಸೌದಿ ನ್ಯಾಶನಲ್ ಇಂಫರ್ಮೇಶನ್ ಸೆಂಟರ್ ಇದರ ಸಹಕಾರದೊಂದಿಗೆ ಸೌದಿ ಪಾಸ್‌ಪೋರ್ಟ್ ಡೈರಕ್ಟರೇಟ್(ಜವಾಝಾತ್) ಇದಕ್ಕೆ ಅಗತ್ಯವಿರುವ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲಿದೆ.
ಸೌದಿ ದೊರೆಯ ನಿರ್ಧಾರವು ಭಾರತೀಯ ವಲಸಿಗರು ಸೇರಿದಂತೆ ಸ್ವದೇಶದಲ್ಲಿ ಉಳಿದಿರುವ ಹಲವಾರು ಕಾರ್ಮಿಕರಿಗೆ ನೆಮ್ಮದಿಯನ್ನು ತಂದಿದೆ.