ಬೆಂಗಳೂರು: ಜೂನ್ 14ರ ನಂತರ ಹಂತ ಹಂತವಾಗಿ ಲಾಕ್ಡೌನ್ ತೆರವಿಗೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಅನ್ಲಾಕ್ ಪ್ರಕ್ರಿಯೆಯನ್ನು ಕೊರೊನಾ ಪಾಸಿಟಿವಿಟಿ ರೇಟ್ ಆಧರಿಸಿ ಮಾಡಲು ಮುಂದಾಗಿದ್ದಾರೆ. ಸದ್ಯ ಕರ್ನಾಟಕದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಒಟ್ಟಾರೆ 11.21%ರಷ್ಟು ಇದೆ. ಪಾಸಿಟಿವಿಟಿ ರೇಟ್ ಶೇ. 5ಕ್ಕಿಂತ ಕಡಿಮೆ ಇದ್ದ ಕಡೆ ಅನ್ ಲಾಕ್ ಮಾಡಲು ಚಿಂತಿಸಲಾಗುತ್ತಿದೆ.
ಯಾವೆಲ್ಲಾ ಜಿಲ್ಲೆಗಳಲ್ಲಿ ಅನ್ ಲಾಕ್ ಸಾಧ್ಯತೆ?
ರಾಜ್ಯದಲ್ಲಿ ಈಗ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಇರುವುದು ಕೇವಲ ಎರಡು ಜಿಲ್ಲೆಗಳಲ್ಲಿ ಮಾತ್ರ. ಬೀದರ್ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಿದ್ದು ಅನ್ಲಾಕ್ ಮಾಡಬಹುದಾಗಿದೆ. ಉಳಿದಂತೆ ರಾಜ್ಯದ 28 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಕೆಯಾಗಬಹುದು ಎನ್ನಲಾಗುತ್ತಿದೆ. ಈ 28 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 5 ಕ್ಕೆ ಇಳಿಯದ ಹೊರತು ಅನ್ ಲಾಕ್ ಇಲ್ಲ ಎನ್ನಲಾಗುತ್ತಿದೆ. ಜಿಲ್ಲೆಗಳ ಸಕ್ರಿಯ ಪ್ರಕರಣಗಳ ಶೇಕಡಾವಾರು ಪ್ರಮಾಣ ನೋಡುವುದಾದರೆ.
ಅತಿ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳು
ಬೀದರ್ – 0.85%
ಕಲಬುರಗಿ – 3.50%
ಹಾವೇರಿ – 5.52%
ಯಾದಗಿರಿ – 5.60%
ಬೆಂಗಳೂರು ನಗರ – 6.23%
ರಾಮನಗರ – 7.34%
ಮೇಲಿನ 6 ಜಿಲ್ಲೆಯಲ್ಲಿ ಶೇ.5ಕ್ಕಿತ ಕಡಿಮೆ ಪಾಸಿಟಿವಿಟಿ ದರ ಇಲ್ಲದಿದ್ದರೂ ಶೇ.5ಕ್ಕೆ ಅತ್ಯಂತ ಸನಿಹವಿದೆ. ಹೀಗಾಗಿ ಈ ಜಿಲ್ಲೆಗಳು ಆದಷ್ಟು ಬೇಗ ಸೇಫ್ ಝೋನ್ನೊಳಕ್ಕೆ ಬರಬಹುದು. ಆಗ ಅನ್ಲಾಕ್ಗೆ ಈ ಜಿಲ್ಲೆಗಳು ಅರ್ಹತೆ ಪಡೆಯಲಿವೆ.
ಅತಿ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳು
ಮೈಸೂರು – 30.23%
ಚಿಕ್ಕಮಗಳೂರು – 24.20%
ಚಿತ್ರದುರ್ಗ – 19.71%
ಉತ್ತರ ಕನ್ನಡ – 19.16%
ದಕ್ಷಿಣ ಕನ್ನಡ – 18.95%
ಹಾಸನ – 18.92%
ಮೇಲಿನ ಈ ಆ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪಾಸಿಟಿವಿಟಿ ರೇಟ್ ಇರುವುದರಿಂದ ಡೇಂಜರ್ ಝೋನ್ನಲ್ಲಿವೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಶುರುವಾಗಲು ಇನ್ನು ಸಾಕಷ್ಟು ಸಮಯ ಹಿಡಿಯಬಹುದು.
ಇತರೆ ಜಿಲ್ಲೆಗಳ ಪಾಸಿಟಿವಿಟಿ ದರ ವಿವರ
ಬಾಗಲಕೋಟೆ – 7.71%
ರಾಯಚೂರು – 9.98%
ದಾರವಾಡ – 10.4%
ವಿಜಯಪುರ – 11.21%
ಶಿವಮೊಗ್ಗ – 11.21%
ಗದಗ – 11.76%
ಬೆಳಗಾವಿ – 11.79
ಚಿಕ್ಕಬಳ್ಳಾಪುರ – 12.70%
ಕೊಡಗು – 13.52%
ಮಂಡ್ಯ – 14.93%
ತುಮಕೂರು – 15.13%
ಬಳ್ಳಾರಿ – 16.13%
ಕೊಪ್ಪಳ – 16.31%
ಬೆಂಗಳೂರು ಗ್ರಾಂ. – 16.4%1
ಉಡುಪಿ – 16.75%
ದಾವಣಗೆರೆ – 18.24%
ಚಾಮರಾಜನಗರ – 18.46%
ಕೋಲಾರ – 18.67%
ಉಳಿದ 18 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಮಧ್ಯಮ ಪ್ರಮಾಣದಲ್ಲಿದ್ದು ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಸಾಬೀತು ಪಡಿಸಿದಲ್ಲಿ ಲಾಕ್ಡೌನ್ನಿಂದ ಮುಕ್ತಿ ಪಡೆಯಬಹುದಾಗಿದೆ.