ಕಲ್ಲುಗುಂಡಿ: ಲಾಕ್ಡೌನ್ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರು ಕೆಲಸವಿಲ್ಲದೆ ಕಷ್ಟದಲ್ಲಿ ಸಿಲುಕಿದನ್ನು ಮನಗಂಡು ಚಟ್ಟೆಕ್ಕಲು ಫ್ರೆಂಡ್ಸ್ ಕ್ಲಬ್(ರಿ.)(ಸಿ.ಎಫ್.ಸಿ) ವತಿಯಿಂದ ಅರ್ಹ 16 ಬಡಕುಟುಂಬಗಳಿಗೆ ಆಹಾರವಸ್ತುಗಳ ಕಿಟ್ ವಿತರಿಸಲಾಯಿತು.
ಸಿ.ಎಫ್.ಸಿ ಅಧ್ಯಕ್ಷರಾದ ಹಸೈನಾರ್ ಸಿ. ಎ., ಮಾಜಿ ಅಧ್ಯಕ್ಷರುಗಳಾದ ಲತೀಫ್ ಕೂಲ್, ಜಲೀಲ್ ಭಾರತ್ ಚಿಕನ್ ಹಾಗೂ ಸದಸ್ಯರಾದ ಸೆಲಿಕ್ ಉಪಸ್ಥಿತರಿದ್ದರು. ಬಿ. ಎಂ. ಫ್ರೂಟ್ಸ್ ಸುಳ್ಯ ಮಾಲಕರಾದ ರಫೀಕ್, ಸಿ.ಎಫ್.ಸಿ ಗೌರವಾಧ್ಯಕ್ಷರಾದ ಹಸೈನಾರ್ ಎಸ್. ಎ, ಮಾಜಿ ಅಧ್ಯಕ್ಷರಾದ ಹನೀಫ್ ಕೆ.ಜೆ, ಉಮರ್ ಸಮ್ಮು, ಸಿ.ಎಫ್.ಸಿ ಗಲ್ಫ್ ಸಮಿತಿ ಸದಸ್ಯರಾದ ಶಫೀಕ್, ಇರ್ಷಾದ್ ಎಂ.ಎಂ, ಹಾಶಿಂ, ಇರ್ಷಾದ್ ಮಿಸ್ಬಾ, ಶಾಕಿರ್, ಅಮೀರ್ ಸುಲ್ತಾನ್, ಸಿ.ಎಫ್.ಸಿ ಹಾಗೂ ಸದಸ್ಯರಾದ ಎಲ್ಲರೂ ಸಹಕರಿಸಿದರು.