janadhvani

Kannada Online News Paper

ರೌಳಾ ಶರೀಫಿನ ಖುಬ್ಬವನ್ನು ಧ್ವಂಸಗೊಳಿಸುವ ರೀತಿಯಲ್ಲಿ ವಾರ್ತೆ- ಭಾರತೀಯ ಚಾನಲ್ ವಿರುದ್ಧ ಸೌದಿ ಗರಂ

ರಿಯಾದ್: ಅನಿಮೇಷನ್‌ನಲ್ಲಿ ಮದೀನಾದ ಮಸ್ಜಿದ್ ಅಲ್ ನಬವಿಯಲ್ಲಿನ ಹಸಿರು ಖುಬ್ಬಾವನ್ನು ನಾಶಪಡಿಸುವ ರೀತಿಯಲ್ಲಿ ಭಾರತೀಯ ಸುದ್ದಿ ಚಾನೆಲ್ ಬಿತ್ತರಿಸಿದ ದುಸ್ಸಾಹಸವನ್ನು ಹರಮೈನ್ ಕಚೇರಿ ತೀವ್ರವಾಗಿ ಖಂಡಿಸಿದೆ.


ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳ ವಿರುದ್ಧ ಇಸ್ರೇಲಿ ನಡೆಸುತ್ತಿರುವ ಆಕ್ರಮಣಗಳನ್ನು ವಾರ್ತೆಯಲ್ಲಿ ಬಿತ್ತರಿಸುವ ವೇಳೆ ಇಸ್ರೇಲ್ ನಡೆಸುತ್ತಿರುವ ವಾಯು ದಾಳಿಯ ಅನಿಮೇಷನ್‌ನಲ್ಲಿ ಮದೀನಾದ ಮಸ್ಜಿದ್ ಅಲ್ ನಬವಿಯಲ್ಲಿನ ಹಸಿರು ಖುಬ್ಬಾವನ್ನು ನಾಶಪಡಿಸುವ ರೀತಿಯಲ್ಲಿ ತೋರಿಸಲಾಗಿದೆ.

ಭಾರತೀಯ ಸುದ್ದಿ ಚಾನೆಲ್ ಒಂದು ತನ್ನ ಚಾನಲಿನ ರೇಟಿಂಗ್ ನ್ನು ಹೆಚ್ಚಿಸುವ ಉದ್ದೇಶದಿಂದ ಇಂತಹಾ ಕ್ರೌರ್ಯತನಕ್ಕೆ ಮುಂದಾಗಿದೆ.

ಇಸ್ಲಾಮಿನ ಪ್ರಮುಖ ನಿಶಾನೆಯಾಗಿರುವ ಹಸಿರು ಖುಬ್ಬಾವನ್ನು ಧ್ವಂಸಗೊಳಿಸುವ ರೀತಿಯಲ್ಲಿ ಪ್ರಕಟಿಸಿ, ಜಾಗತಿಕ ಮುಸಲ್ಮಾನರ ಮನಸ್ಸನ್ನು ಘಾಸಿಗೊಳಿಸಿದ ಚಾನಲ್ ಕೂಡಲೇ ಕ್ಷಮೆ ಯಾಚನೆ ನಡೆಸಬೇಕೆಂದು ಹರಮೈನ್ ಸಂಪಾದಕೀಯ ತಂಡ ಒತ್ತಾಯಿಸಿದೆ.

error: Content is protected !! Not allowed copy content from janadhvani.com