ಬೆಂಗಳೂರು, ಏ.21: ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ನಿನ್ನೆ ಇದೇ ವಿಷಯವಾಗಿ ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಎಲ್ಲರ ಸಲಹೆ ಪಡೆದು, ಬಳಿಕ ಅಂತಿಮವಾಗಿ ಹಲವು ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಕ್ರಮಗಳು ಮುಂದಿನ 14 ದಿನಗಳ ಕಾಲ ರಾಜ್ಯದಲ್ಲಿ ಜಾರಿಯಲ್ಲಿ ಇರಲಿದೆ.
ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ನಿನ್ನೆ ಪ್ರಕಟಿಸಿದರು. ಇಂದಿನಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೊಸ ಮಾರ್ಗಸೂಚಿಯ ಪ್ರಕಾರ ಹೊಸ ನಿರ್ಬಂಧಗಳು ಹೀಗಿವೆ.
ಮುಂದಿನ 14 ದಿನಗಳವರೆಗೆ ಅಂದರೆ ಮೇ 4ರವರೆಗೆ ಹೊಸ ಮಾರ್ಗಸೂಚಿ ಜಾರಿ
ನಿರ್ಬಂಧ :
- ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ.
- ಶನಿವಾರ ಮತ್ತು ಭಾನುವಾರ ಇಡೀ ರಾಜ್ಯ ಫುಲ್ ಡೇ ವೀಕೆಂಡ್ ಕರ್ಫ್ಯೂ.
- ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವೂ ಬಂದ್.
- ಮಾಲ್ ಗಳು ಕ್ಲೋಸ್.
- ಸ್ವಿಮಿಂಗ್ ಫೆಡರೇಶನ್ ಪ್ರಾಕ್ಟೀಸ್ ಇದ್ರೆ ಅವರಿಗೆ ಮಾತ್ರ ಅವಕಾಶ.
- ಧಾರ್ಮಿಕ ಕೇಂದ್ರಗಳಾದ ಮಂದಿರ, ಮಸೀದಿ, ಚರ್ಚ್ ಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧ.
- ದೇವಸ್ಥಾನದ ಪೂಜೆ ಅರ್ಚಕರಿಗೆ ಮಾತ್ರ ಸೀಮಿತ.
- ಹೋಟೆಲ್, ರೆಸ್ಟೋರೆಂಟ್ನಲ್ಲಿ ಪಾರ್ಸಲ್ಗೆ ಮಾತ್ರ ಸೀಮಿತ.
ಅವಕಾಶ
- ಕೈಗಾರಿಕೆ, ವ್ಯವಸಾಯ, ದಿನಸಿ ಮಳಿಗೆಗೆ ಅನುಮತಿ, ತರಕಾರಿ ಮಾರುಕಟ್ಟೆ ತೆರೆದ ಪ್ರದೇಶದಲ್ಲಿ ಏ.23ರಿಂದ ಮಾರಾಟ.
- ಕಟ್ಟಡ ನಿರ್ಮಾಣ ಕೆಲಸ ನಡೆಯಲಿದೆ.
- ಮಾರುಕಟ್ಟೆ ಹೊರವಲಯಕ್ಕೆ ಶಿಫ್ಟ್.
- ಲಿಕ್ಕರ್ ಶಾಪ್, ಬಾರ್ನಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ
- ಇ ಕಾಮರ್ಸ್ ಗೆ ಅವಕಾಶ
- ಸರ್ಕಾರಿ ಕಚೇರಿ ಶೇ. 50 ರಷ್ಟು ಮಾತ್ರ ಅವಕಾಶ.
- ಐಟಿ ಬಿಟಿ ವರ್ಕ್ ಫ್ರಮ್ ಹೋಮ್.
- ಅಂತರಾಜ್ಯ ಓಡಾಟಕ್ಕೆ ಅವಕಾಶ.
- ಸಾರಿಗೆ ಬಸ್ಗಳಲ್ಲಿ ಶೇ.50 ಮಾತ್ರ ಅವಕಾಶ.
- ಮದುವೆ ಸಮಾರಂಭದಲ್ಲಿ 50 ಜನ ಮಾತ್ರ ಭಾಗಿಯಾಗಲು ಅವಕಾಶ.
- ಶವಸಂಸ್ಕಾರದಲ್ಲಿ 30 ಜನ ಪಾಲ್ಗೊಳ್ಳಬಹುದು
- ಕೈಗಾರಿಕೆ ನೈಟ್ ಶಿಫ್ಟ್ ಇರುತ್ತೆ
- ಬಸ್ ಗಳಲ್ಲಿ ದೂರ ಪ್ರಯಾಣಕ್ಕೆ ಮಾತ್ರ ಅವಕಾಶ
144 ಸೆಕ್ಷನ್ ಇಡೀ ರಾಜ್ಯದಲ್ಲಿ ಜಾರಿಯಲ್ಲಿರಲಿದೆ.