ಮಲ್ಲೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾ ಕೇಂದ್ರ ,ಬಹುಭಾಷಾ ವಾಗ್ಮಿ ಯೂ ,ಸಂಘಟನಾ ಚತುರರೂ ,ಜಂಇಯ್ಯತುಲ್ ಉಲಮಾ ಬಜ್ಪೆ ಝೋನ್ ಅಧ್ಯಕ್ಷರೂ ಆದ ಬಹು ಅಶ್ರಫ್ ಸಅದಿ ಉಸ್ತಾದ್ ಮಲ್ಲೂರು ರವರ ಸಾರಥ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಸಾಸ್ ಎಜುಕೇಷನಲ್ ಸೆಂಟರ್ ಮಲ್ಲೂರು ಇದರ ಆಶ್ರಯದಲ್ಲಿ ಏಪ್ರಿಲ್ 3 ರಂದು ಮಜ್ಲಿಸ್ ಅಹ್ಲ್ ಬದ್ರ್ ನ 8 ನೇ ವಾರ್ಷಿಕ ಕಾರ್ಯಕ್ರಮ ನಡೆಯಲಿದೆ.
ಸಂಸ್ಥೆಯ ಮುದರ್ರಿಸ್ ನಿಝಾಮುದ್ದೀನ್ ಬಾಫಖಿ ತಙಳ್ ಕೊಯಿಲಾಂಡಿ ದುಆ ಆಶಿರ್ವಚನ ನೀಡಲಿದ್ದು ಸಂಸ್ಥೆಯ ಸಾರಥಿ ಅಶ್ರಫ್ ಸಅದಿ ಮಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಪ್ರಸ್ತುತ ಕಾರ್ಯಕ್ರಮದಲ್ಲಿ ,ಪ್ರಭಾಷಣ ಲೋಕದ ಸರಿ ಸಾಠಿಯಿಲ್ಲದ ಸುಲ್ತಾನ್ ,ಸಮಸ್ತ
ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.
ಸಾಮಾಜಿಕ ,ಶೈಕ್ಷಣಿಕ ,ರಾಜಕೀಯ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಂಇಯ್ಯತುಲ್ ಉಲಮಾ ಬಜ್ಪೆ ಝೋನ್ ಕರೆಯನ್ನು ನೀಡಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿಯೂ ,ಕುಪ್ಪೆಪದವು ಕೇಂದ್ರ ಜುಮಾ ಮಸೀದಿಯ ಖತೀಬರೂ ಆದ ಅಬೂಝೈದ್ ಶಾಫಿ ಮದನಿ ಕರಾಯ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.