janadhvani

Kannada Online News Paper

ಮಸೀದಿಯ ಮುಅಝ್ಝಿನ್ ರಿಗೆ ದುಷ್ಕರ್ಮಿಗಳಿಂದ ಹಲ್ಲೆ-ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ

ಮಂಗಳೂರು,ಮಾ.30: ನಿನ್ನೆ ತಡ ರಾತ್ರಿ ಮಂಗಳೂರು ಸಮೀಪದ ಫರಂಗಿಪೇಟೆ ಯಲ್ಲಿರುವ ಬಿರ್ರುಲ್ ವಾಲಿದೈನ್ ಮಸೀದಿಯ ಮುಅಝ್ಝಿನ್ ರವರ ಮೇಲೆ ದುಷ್ಕರ್ಮಿಗಳು ಏಕಾಏಕಿ ಮಸೀದಿಗೆ ನುಗ್ಗಿ ಹಲ್ಲೆ ನಡೆಸಿರುತ್ತಾರೆ.

ದುಷ್ಕರ್ಮಿಗಳ ಈ ಕೃತ್ಯವು ಮತೀಯ ಸೌಹಾರ್ದವನ್ನು ಕೆಡಿಸುವ ಹುನ್ನಾರವಾಗಿದೆ. ಮುಸ್ಲಿಮ್ ಧಾರ್ಮಿಕ ಕೇಂದ್ರಗಳ ಮೇಲೆ ಧಾಳಿ ನಡೆಸಿ ಆ ಮೂಲಕ ಒಂದು ಧರ್ಮದ ಜನರ ಭಾವನೆಗಳನ್ನು ಕೆರಳಿಸಿ, ಕೋಮು ಪ್ರಚೋದನೆಗೆ ಅವಕಾಶ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ಇದನ್ನು ಮುಸ್ಲಿಮ್ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ.

ಇತ್ತೀಚೆಗೆ ಇಂತಹ ಹಲವಾರು ಕೋಮು ಪ್ರಚೋದನಾ ಕೃತ್ಯಗಳು ಅಲ್ಲಲ್ಲಿ ಕಾಣತೊಡಗಿವೆ. ಮೊದಲೇ ಕೋಮು ಸೂಕ್ಷ್ಮವಾದ ಈ ಜಿಲ್ಲೆಯಲ್ಲಿ ಇದರಿಂದಾಗಿ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟಾಗುತ್ತಿವೆ.

ಈ ಕೃತ್ಯವನ್ನು ಯಾರೇ ಮಾಡಿದರೂ, ಗ್ರಹ ಇಲಾಖೆ ಕೂಡಲೇ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಿ ನ್ಯಾಯವನ್ನು ಒದಗಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ ಅಶ್ರಫ್ (ಮಾಜಿ ಮೇಯರ್) ಎಚ್ಚರಿಕೆ ನೀಡಿದ್ದಾರೆ.

error: Content is protected !! Not allowed copy content from janadhvani.com