janadhvani

Kannada Online News Paper

ಧರ್ಮಗುರುಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; ಎಸ್ಕೆಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಖಂಡನೆ

ಸಕಲೇಶಪುರ: ತಾಲೂಕಿನ ಸುಂಡಕೆರೆ ಎಂಬಲ್ಲಿ ಖತೀಬರಾಗಿ ಸೇವೆಸಲ್ಲಿಸುತ್ತಿರುವ ಮೂಲತಃ ಕೊಡಗು ಜಿಲ್ಲೆ ಸೋಮವಾರಪೇಟೆ ಸಮೀಪದ ಕಾಗಡಿಕಟ್ಟೆ ನಿವಾಸಿಯಾದ ನಾಸಿರ್ ದಾರಿಮಿ ಉಸ್ತಾದರ ಮೇಲೆ ನಡೆದ ಹಲ್ಲೆಯನ್ನು SKSSF ಕೊಡಗು ಜಿಲ್ಲಾ ಸಮಿತಿಯು ಬಲವಾಗಿ ಖಂಡಿಸುತ್ತದೆ.

ಮಸೀದಿಗೆ ನಡೆದುಕೊಂಡು ಹೋಗುವಾಗ ಹಿಂಭಾಗದಿಂದ ಬಂದ ದುಷ್ಕರ್ಮಿಗಳು ವಿನಾ ಕಾರಣ ಅಮಾಯಕ ಉಸ್ತಾದರ ಮೇಲೆ ಹಲ್ಲೆ ನಡೆಸಿದ್ದು, ಈ ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಇಂತಹ ದುಷ್ಕೃತ್ಯದ ಹಿಂದೆ ಇರುವ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಸ್ಕೆಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.