ನವದೆಹಲಿ: ದೇಶದಲ್ಲಿ ಮುಂದಿನ 2024 ರ ಲೋಕಸಭಾ ಚುನಾವಣೆ ವೇಳೆ ರಿಮೋಟ್ ವೋಟಿಂಗ್ ಪರಿಕಲ್ಪನೆ ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಹೇಳಿದ್ದಾರೆ.
ರಿಮೋಟ್ ವೋಟಿಂಗ್ ಅಭಿವೃದ್ಧಿಪಡಿಸಲು ಈ ವರ್ಷದ ಆರಂಭದಿಂದಲೇ ಸಂಶೋಧನೆ ನಡೆದಿದೆ. ಐಐಟಿ ಮದ್ರಾಸ್ ಹಾಗೂ ಇತರೆ ಐಐಟಿಗಳ ತಂತ್ರಜ್ಞಾನ ಪರಿಣಿತರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಲಾಗುತ್ತಿದೆ. ರಾಜಕೀಯ ಪಕ್ಷಗಳು ಮತ್ತು ಇತರ ಸಹವರ್ತಿಗಳ ಜೊತೆ ರಿಮೋಟ್ ವೋಟಿಂಗ್ ಕುರಿತು ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳ ಜೊತೆಗೆ ರಿಮೋಟ್ ವೋಟಿಂಗ್ ಕುರಿತು ಚರ್ಚೆ ನಡೆಸಲಾಗುವುದು. ಎಲ್ಲರ ಸಹಮತ ಪಡೆದ ಬಳಿಕವೇ ಈ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.