janadhvani

Kannada Online News Paper

ಸೌದಿ: ಇಖಾಮಾ ಮತ್ತು ಚಾಲನಾ ಪರವಾನಗಿಗಳ ಡಿಜಟಲೀಕರಣ ಜಾರಿ

ರಿಯಾದ್: ಸೌದಿ ಅರೇಬಿಯಾದಲ್ಲಿ ಇಕಾಮಾ, ಚಾಲನಾ ಪರವಾನಗಿ ಮತ್ತು ವಾಹನ ಇಸ್ತಿಮಾರಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ.

ಪೊಲೀಸ್ ತಪಾಸಣೆ ಮತ್ತು ಬ್ಯಾಂಕುಗಳು, ಕಂಪನಿಗಳು ಮತ್ತು ಸರ್ಕಾರಿ ಇಲಾಖೆಗಳ ವಹಿವಾಟಿನ ಸಂದರ್ಭದಲ್ಲಿ ಮೊಬೈಲ್ ಫೋನ್‌ನಲ್ಲಿ ಡಿಜಿಟಲ್ ಇಕಾಮಾ ಮತ್ತು ಪರವಾನಗಿಯನ್ನು ತೋರಿಸಿದರೆ ಸಾಕು ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂದರ್ ಅಲ್-ಮುಷಾರಿ ಹೇಳಿದರು. ಈ ಸೇವೆ ಸೌದಿ ಅರೇಬಿಯಾದ ಬತ್ವಾಖಗಳಿಗೂ ಲಭ್ಯವಿದೆ. ಅಸ್ತಿತ್ವದಲ್ಲಿರುವ ಪ್ಲಾಸ್ಟಿಕ್ ದಾಖಲೆಗಳನ್ನು ಇನ್ನು ಮುಂದೆ ಹೊತ್ತು ನಡೆಯುವ ಅಗತ್ಯವಿಲ್ಲ.

ತಪಾಸಣೆಯ ಸಮಯದಲ್ಲಿ,ಪೊಲೀಸರ ಮೊಬೈಲ್ ಫೋನ್‌ನಲ್ಲಿರುವ ಮೈದಾನ್ ಆ್ಯಪ್ ಮೂಲಕ ಡಿಜಿಟಲ್ ಇಕಾಮಾವನ್ನು ಪರಿಶೀಲಿಸಬಹುದು. ಈ ಡಿಜಿಟಲ್ ದಾಖಲೆಯನ್ನು ಸೌದಿ ಅರೇಬಿಯಾದ ಯಾವುದೇ ವಹಿವಾಟಿನ ಅಂತಿಮ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಫೋನ್‌ಗಳಿಗೆ ಇಂಟರ್ನೆಟ್ ಇಲ್ಲದಿದ್ದರೂ ಡಿಜಿಟಲ್ ಇಕಾಮಾವನ್ನು ತೋರಿಸಬಹುದು.

ಪಡೆಯುವ ವಿಧಾನ?

  1. ಮೊಬೈಲ್ ಫೋನ್‌ಗಳಲ್ಲಿ Absher Individual ಡೌನ್‌ಲೋಡ್ ಮಾಡಿ.
  2. ಅಬ್ಶೀರ್ ಯೂಸರ್ ನೇಮ್ ಪಾಸ್‌ವರ್ಡ್ ಉಪಯೋಗಿಸಿ ಲಾಗಿನ್ ಮಾಡಿ.
  3. “My services” ನಲ್ಲಿ “Activate Digital ID” ಆಯ್ಕೆ ಮಾಡಿ.
  4. ಕೆಳಗಡೆ “Activate Digital ID” ಕ್ಲಿಕ್ ಮಾಡಿ.

ಹೀಗೆ ಮಾಡಿದರೆ, ಕ್ಯೂಆರ್ ಕೋಡ್ ಪ್ರತ್ಯಕ್ಷಗೊಳ್ಳುತ್ತದೆ. ಇದನ್ನೇ ಡಿಜಿಟಲ್ ಇಖಾಮಾ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು.

error: Content is protected !! Not allowed copy content from janadhvani.com