ಉಡುಪಿ: ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿದ್ದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ವಿಯೋಗದಿಂದ ತೆರವಾದ ಖಾಝಿ ಸ್ಥಾನಕ್ಕೆ ಸಂಯುಕ್ತ ಜಮಾಅತ್ ನ ವ್ಯಾಪ್ತಿಯ ಸುಮಾರು 100 ರಷ್ಟು ಮಸೀದಿಗಳಿಗೆ ಖಾಝಿಯಾಗಿ ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ, ಕನ್ನಡ ನಾಡಿನ ಖ್ಯಾತ ವಿದ್ವಾಂಸರೂ ಆದ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದರನ್ನು ನೇಮಿಸುವುದೆಂದು ಸಂಯುಕ್ತ ಜಮಾಅತ್ ನ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಸಂಯುಕ್ತ ಜಮಾಅತ್ ನ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರ್ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಯುಕ್ತ ಜಮಾಅತ್ ನ ಸದಸ್ಯರುಗಳು, ಜಿಲ್ಲೆಯ ಪ್ರಮುಖ ಉಲಮಾ ಹಾಗೂ ಉಮರಾ ನೇತಾರರು ಭಾಗವಹಿಸಿದರು.
ಅಕ್ಟೋಬರ್ 10 ಶನಿವಾರ ಬೆಳಿಗ್ಗೆ ಗಂಟೆ 10ಕ್ಕೆ ಕೇಂದ್ರ ಮಸೀದಿ ಮೂಳೂರು ನಲ್ಲಿ ಖಾಝಿ ಸ್ವೀಕಾರ ಸಮಾರಂಭ ಹಾಗೂ ತಾಜುಲ್ ಫುಖಹಾಅ ಬೇಕಲ್ ಉಸ್ತಾದ ಹೆಸರಿನಲ್ಲಿ ಪ್ರಾರ್ಥನಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಸಾದಾತುಗಳು, ಉನ್ನತ ಉಲಮಾಗಳೂ,ಉಮರಾ ನಾಯಕರೂ ಭಾಗವಹಿಸಲಿರುವರು.
ಹಾಜಿ ಪಿ ಅಬೂಬಕ್ಕರ್ ನೇಜಾರು (ಅಧ್ಯಕ್ಷರು)
ಹಾಜಿ ಎಮ್ ಎ ಬಾವು ಮೂಳೂರು (ಪ್ರಧಾನ ಕಾರ್ಯದರ್ಶಿ)
ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ (ಸಂಘಟನಾ ಕಾರ್ಯದರ್ಶಿ)
ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲೆ