ಕಳೆದ 2 ದಿನಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ, ಕರಾವಳಿ ಪ್ರದೇಶದ ಅತೀ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಪ್ರದೇಶವಾದ ಹೇರೂರು, ಕೆ.ಜಿ ರೋಡ್, ಕೊಳಲಗಿರಿ , ಮಣಿಪುರ, ಕಟಪಾಡಿ ಕುರ್ಕಾಲು, ಹೂಡೆ ಹಾಗು ಉಪ್ಪೂರು ಬಳಿಯ ನೆರೆ ಹಾವಳಿಯಿಂದ ತತ್ತರಿಸಿರುವ ಜನರ ಹಾಗು ಪ್ರಾಣಿಗಳ ಜೀವ ರಕ್ಷಣೆಯಲ್ಲಿ ಅಗ್ನಿಶಾಮಕ ದಳ ಇಲಾಖೆಯೊಂದಿಗೆ ಮತ್ತು ಸ್ಥಳೀಯ ಪಂಚಾಯತ್ ಸದಸ್ಯರೊಂದಿಗೆ ಕೈಜೋಡಿಸಿ ಮಾನವಿಯ ಸೇವೆ ಮಾಡಲಾಯಿತು.
ಅದೇ ರೀತಿ ಉಪ್ಪೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆರೆ ನೀರು ನಿಂತದ್ದರಿಂದ ಸುಗಮ ವಾಹನ ಸಂಚಾರವಾಗುವಂತೆ ಸೇವೆ ಮಾಡಲಾಯಿತು.
ಉಡುಪಿ ಡಿವಿಷನ್ ಎಸ್ಸೆಸ್ಸೆಫ್ ಡಿಫೆನ್ಸ್ ಪೋರ್ಸ್ ಹೆಲ್ಪ್ ಡೆಸ್ಕ್ ತಂಡದ ಚೇರ್ಮೆನ್ ಮಜೀದ್ ಕಟಪಾಡಿ ಇವರ ನೇತ್ರತ್ವದಲ್ಲಿ , ಕನ್ವೀನರ್ ಆಸೀಪ್ ಸರಕಾರಿಗುಡ್ಡೆ, ಕಯ್ಯೂಮ್ ಮಲ್ಪೆ, ಬಿಲಾಲ್ ಮಲ್ಪೆ, ಸಿದ್ದೀಕ್ ಸಂತೋಷ್ ನಗರ, ನಾಸೀರ್ ಭದ್ರಗಿರಿ, ಇಮ್ತಿಯಾಜ್ ಹೊನ್ನಾಳ, ಅಲ್ತಾಫ್ ಮಲ್ಪೆ, ನಝೀರ್ ಸಾಸ್ತಾನ, ಇಬ್ರಾಹಿಂ ರಂಗನಕೆರೆ, ಶಂಶುದ್ದೀನ್, ಸುಲೈಮಾನ್ , ಪಾರೂಕ್ Rk, ಮುತ್ತಲಿಬ್ ಬಾರ್ಕೂರು, ಇಮ್ರಾನ್ ಹೊನ್ನಾಳ ,ಸಲ್ಮಾನ್ ಮಣಿಪುರ, ಇರ್ಷಾದ್ ಮಣಿಪುರ, ರಫೀಕ್ ಕಟಪಾಡಿ, ಶಮೀರ್ ಮಣಿಪುರ, ಸಫ್ವಾನ ಮಣಿಪುರ, ಸಿಹಾನ್ ಹೂಡೆ, ಫಾಯಿಝ್ ಹೂಡೆ ಈ ಸೇವೆಯಲ್ಲಿ ಕೈಜೋಡಿಸಿದರು. ಈ ಸಂದರ್ಭದಲ್ಲಿ ನಮ್ಮೊಂದಿಗೆ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಹೆಲ್ಪ್ ಡೆಸ್ಕ್ ಚೇರ್ಮೆನ್ ಮಜೀದ್ ಹನೀಪಿ ಕಾಪು ಹಾಗೂ ಸುನ್ನೀ ಹೆಲ್ಪ್ ಡೆಸ್ಕ್ ನ ನಾಯಕರಾದ ಬಶೀರ್ ಉಸ್ತಾದ್ ಮಜೂರು ಸ್ಥಳಕ್ಕೆ ಬೇಟಿ ನೀಡಿ ಸಹಕರಿಸಿದರು.