ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಇದರ ಸ್ಥಾಪಕ ದಿನ ಸೆ 19 . ರಾಜ್ಯ ಸಮಿತಿಯ ಸುತ್ತೋಲೆಯಂತೆ ಬೈತಡ್ಕ ಶಾಖಾ ವತಿಯಿಂದ ಧ್ವಜ ದಿನವನ್ನು ಅಬ್ದುಲ್ ಲತೀಫ್ SM ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
SSF ಬೈತಡ್ಕ ಶಾಖಾ ಅಧ್ಯಕ್ಷರಾದ ಅಬ್ದುಲ್ ಲತೀಫ್ S.M ಧ್ವಜಾರೋಹಣಗೈದರು.SYS ಸವಣೂರು ವಲಯ ಉಪಾಧ್ಯಕ್ಷರಾದ ಯುಸುಫ್ ಸಖಾಫಿ ದೇವಸ್ಯ ಅಗಲಿದವರನ್ನನುಸ್ಮರಿಸುತ್ತಾ ಪ್ರಾರ್ಥನೆಗೈದರು.
ಬೆಳಂದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಝೀರ್ ದೇವಸ್ಯ ಶುಭ ಹಾರೈಸಿ ಮಾತನಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಅದ್ದುಚ್ಚ ಬೆಳಂದೂರು, ಯಾಕುಬ್ ಬೆಳಂದೂರು, ಅಬೂಬಕ್ಕರ್ ಬೆಳಂದೂರು, ಮೊದಲಾದವರು ಉಪಸ್ಥಿತರಿದ್ದರು.
ನಂತರ ಉಡುಪಿ ಸಂಯುಕ್ತ ಖಾಝಿ ಶೈಖುನಾ ಬೇಕಲ ಉಸ್ತಾದರ ಚೇತರಿಕೆಗೆ ಬೇಕಾಗಿ ಬೈತಡ್ಕ ದರ್ಗಾ ಶರೀಫ್ ವಠಾರದಲ್ಲಿ ಸಿನಾನ್ ಸಅದಿ ಉಸ್ತಾದರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.SSF ಕೂರತ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಾತಿಷ್ ಬೆಳಂದೂರು ಸ್ವಾಗತಿಸಿ ವಂದಿಸಿದರು.