ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಕನ್ನಡ ಮಣ್ಣಿನಲ್ಲಿ ಸ್ಥಾಪಿತಗೊಂಡ ದಿನ ಸೆಪ್ಟಂಬರ್ 19. 31 ವರ್ಷಗಳನ್ನು ಪೂರ್ತೀಕರಿಸಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಮೂಹಿಕ ಕ್ಷೇತ್ರಗಳಲ್ಲಿ ಕ್ರಾಂತಿಯ ಅಲೆಯನ್ನಬ್ಬಿಸಿದೆ. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಹಾಗೂ ಅಧೀನದ ಸೆಕ್ಟರ್ ಮತ್ತು ಯುನಿಟ್ ಕೇಂದ್ರಗಳಲ್ಲಿ ಧ್ವಜ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಇದರ ಅಂಗವಾಗಿ ಧ್ವಜಾರೋಹಣ, ಪೋಸ್ಟರ್ ಪ್ರದರ್ಶನ, ಪೌರ ಕಾರ್ಮಿಕರೊಂದಿಗೆ ಸ್ನೇಹ ಸಮ್ಮಿಲನ, ಅಗಲಿದ ಸಾಂಘಿಕ ನಾಯಕರು, ಕಾರ್ಯಕರ್ತಥಿಗೆ ದುಆ, ದಅವಾ ಕಾನ್ಫರೆನ್ಸ್, ನೀಡ್ 2020 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಧ್ವಜ ದಿನದ ಸಮಾರೋಪ ಕಾರ್ಯಕ್ರಮ ನೀಡ್ 2020 ಬೆಳ್ಳಾರೆ ದಾರುಲ್ ಹುದಾ ತಂಬಿನಮಕ್ಕಿಯಲ್ಲಿ ರಾತ್ರಿ 9ರಿಂದ ಬೆಳಗ್ಗೆ 5ರ ತನಕ ಸಮಿತಿ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆಯಲ್ಲಿ ಜರಗಿತು. ಎಸ್ಸೆಸ್ಸೆಫ್ ದ.ಕ ಈಸ್ಟ್ ಝೋನ್ ಸದಸ್ಯ ಜುನೈದ್ ಸಖಾಫಿ ಜೀರ್ಮುಖಿ ದುಆ ನೆರವೇರಿಸಿದರು. ಎಸ್ಸೆಸ್ಸೆಫ್ ದ.ಕ ಈಸ್ಟ್ ಝೋನ್ ಸದಸ್ಯ ಅಬ್ದುಲ್ ಹಮೀದ್ ಸಖಾಫಿ ಪಾಣಾಜೆ ಉದ್ಘಾಟಿಸಿದರು. ಬೆಳ್ಳಾರೆ ದಾರುಲ್ ಹಿಕ್ಮಾ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ ಶುಭ ಹಾರೈಸಿದರು. ಸಾಂಘಿಕ ತರಗತಿಗಳಿಗೆ ದಾರುಲ್ ಹುದಾ ತಂಬಿನಮಕ್ಕಿ ಪ್ರ. ಕಾರ್ಯದರ್ಶಿ ಸಯ್ಯಿದ್ ಹಾಮಿದ್ ಅನ್ವರ್ ಅಲ್ ಅಹ್ದಲ್ ಅಸ್ಸಖಾಫಿ ಹಾಗೂ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷ ತೌಸೀಫ್ ಸಅದಿ ಹರೇಕಳ ನೇತೃತ್ವ ನೀಡಿದರು.
ಚರ್ಚಾಗೋಷ್ಠಿಗೆ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರ. ಕಾರ್ಯದರ್ಶಿ ಶರೀಫ್ ನಂದಾವರ ಹಾಗೂ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ ನೇತೃತ್ವ ನೀಡಿದರು. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆರ್ಕಳ, ಜಿಲ್ಲಾ ಬ್ಲಡ್ ಸೈಬೋ ವೈಸ್ ಚೇರ್ಮಾನ್ ನವಾಝ್ ಸಖಾಫಿ, ಜಿಲ್ಲಾ ನಾಯಕರಾದ ಇಕ್ಬಾಲ್ ಮಾಚಾರ್, ಮುಸ್ತಫ ಉರುವಾಲುಪದವು, ಹಕೀಂ ಕಳಂಜಿಬೈಲ್ ಮುಖ್ಯ ಅತಿಥಿಗಳಾಗಿದ್ದರು.
ಡಿವಿಷನ್ ಸಮಿತಿ ಪ್ರ. ಕಾರ್ಯದರ್ಶಿ ಸಿರಾಜ್ ಹಿಮಮಿ ಕುಂಭಕ್ಕೋಡು ಸ್ವಾಗತಿಸಿ ಕಾರ್ಯದರ್ಶಿ ಸಫ್ವಾನ್ ಸುಣ್ಣಮೂಲೆ ವಂದಿಸಿದರು.