ಪುತ್ತೂರು: SYS , SSF ಚೆನ್ನಾವರ ಶಾಖೆಯ ವತಿಯಿಂದ ಆಯೋಜಿಸಿದ ಬೃಹತ್ ಆಯುಷ್ಮಾನ್ ಶಿಬಿರವು ಅತ್ಯಂತ ಅಭಿನಂದನಾರ್ಹ ರೂಪದಲ್ಲಿ ಯಶಸ್ವಿಗೊಂಡಿತು.
ಅದಿತ್ಯವಾರ ಬೆಳಗ್ಗೆ ಎಂಟುವರೆ ಗಂಟೆಗೆ ಆರಂಭಿಸಿದ ಅಭಿಯಾನದಲ್ಲಿ ಸರ್ವ ಧರ್ಮ, ಜಾತಿ , ಪಕ್ಷ ಪಂಗಡಗಳ ಭೇದಮನ್ಯೆ ಊರಿನ ಸರ್ವ ಜನರು ಭಾಗವಹಿಸಿ ಪ್ರಯೋಜನ ಪಡೆದರು. ಶಿಬಿರದಲ್ಲಿ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿದ ಸಾರ್ವಜನಿಕರು SSF ನಡೆಸಿಕೊಂಡು ಬರುವ ಜನಪರ ಕಾರ್ಯ ಚಟುವಟಿಕೆಯನ್ನು ಮುಕ್ತ ಕಂಠದಿಂದ ಪ್ರಶಿಂಸಿದರು.