ಯುಎಇ: ಮಂಗಳೂರಿನ ಹೆಸರಾಂತ ಉದ್ಯಮಿ ಹಾಗೂ ಸಾಮಾಜಿಕ, ಶೈಕ್ಷಣಿಕ ಹೋರಾಟಗಾರ ತುಂಬೆ ಬಿ.ಎ ಗ್ರೂಪ್ ಸ್ಥಾಪಕ ಬಿ. ಅಹ್ಮದ್ ಹಾಜಿ ತುಂಬೆರವರ ನಿಧನಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಸುನ್ನತ್ ಜಮಾಅತ್ತಿನ ಹಲವಾರು ವೇದಿಕೆಗಳಲ್ಲಿ ಭಾಗವಹಿಸುತ್ತಿದ್ದ ಬಿ. ಅಹ್ಮದ್ ಹಾಜಿ ತುಂಬೆರವರು ಶೈಕ್ಷಣಿಕವಾಗಿಯೂ ಸಾಮಾಜಿಕವಾಗಿಯೂ ಸಮುದಾಯದ ಅಭಿವೃದ್ದಿಯ ಬಗ್ಗೆ ಆಲೋಚನೆಯನ್ನು ಹೊಂದಿದ್ದರು. ಅದಕ್ಕಾಗಿಯೇ ಅವರು ಬಿ.ಎ ಗ್ರೂಪ್ ಹೆಸರಿನಲ್ಲಿ ಹಲವಾರು ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು.
ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದರು. ಉಲಾಮಾಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಬಿ. ಅಹ್ಮದ್ ಹಾಜಿ ತುಂಬೆರವರು ಕೊಡುಗೈ ದಾನಿಯಾಗಿದ್ದರು ಎಂದು ಕೆಸಿಎಫ್ ಯುಎಇ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಬಿ. ಅಹ್ಮದ್ ಹಾಜಿ ತುಂಬೆರವರ ಹೆಸರಿನಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಕುರಾನ್ ತಹ್ಲೀಲ್ ಸಮರ್ಪಿಸಿ ಮಗ್ಫಿರತ್ ಗಾಗಿ ದುಆ ಮಾಡಬೇಕೆಂದು ಎಲ್ಲಾ ಸುನ್ನೀ ಸಂಘಟನೆಗಳಲ್ಲಿ ಮನವಿ ಮಾಡಿದರು.