janadhvani

Kannada Online News Paper

ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಸಿಯೇಷನ್ ಬೆಂಗಳೂರು ವಲಯ ಅಸ್ತಿತ್ವಕ್ಕೆ

ಬೆಂಗಳೂರು: ಕೊಡಗು ಜಿಲ್ಲೆಯವರ ಹೆಮ್ಮೆಯ ಸಂಘಟನೆಯಾದ ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಶಿಯೇಷನ್ (KSWA) ಇದೀಗ ಬೆಂಗಳೂರಿನಲ್ಲಿ ನೂತನ ವಲಯ ರಚನೆಯಾಗಿದೆ.. . ಹಂಸ ಉಸ್ತಾದ್ ಚೋಕಂಡಳ್ಳಿ ಅವರ ಪ್ರಾರ್ಥನೆಯೊಂದಿಗೆ ಕರ್ನಾಟಕ ರಾಜ್ಯ SYS ಮೀಡಿಯಾ ಕಾರ್ಯದರ್ಶಿ ಹಫೀಳ್ ಸಅದಿ ಕೊಳಕ್ಕೇರಿ ರವರ ಅಧ್ಯಕ್ಷತೆಯಲ್ಲಿ ನಡೆದ ಆನ್‌ಲೈನ್ ಸಭೆಯಲ್ಲಿ ಪ್ರಸ್ತುತ ಸಮಿತಿಯನ್ನು ರಚಿಸಲಾಯಿತು.

ಸಭೆಯನ್ನು SYS ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಬಶೀರ್ ಸಅದಿ ಉದ್ಘಾಟಿಸಿದರು.

KSWA GCC ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ವಿಷಯ ಮಂಡಿಸಿ ಮಾತನಾಡಿ
ಕೊಡಗು ಜಿಲ್ಲೆಯ ಸುನ್ನಿ ಸಂಘ ಕುಟುಂಬ ಮತ್ತು ಸಂಸ್ಥೆಗಳನ್ನು, ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಂತ್ವನ ಕಾರ್ಯ ಚಟುವಟಿಕೆಗಳನ್ನು ಸಕ್ರೀಯವಾಗಿಸುವ ಸಲುವಾಗಿ ಮತ್ತು ಕಷ್ಟ ಅನುಭವಿಸಿತ್ತಿರುವ ಅನಿವಾಸಿ ಕೊಡಗಿನವರಿಗೆ ಸಹಾಯ-ಸಹಕಾರಗಳನ್ನು ನೀಡುವ ಉದ್ದೇಶದಿಂದ ಮಾತ್ರ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ನ್ನು ರಚಿಸಲಾಗಿದೆ, ಹೊರತು ಯಾವುದೇ ಇತರ ಸಂಘಟನೆಗಳ ಬದಲ್ ಶಕ್ತಿಯಾಗಿ ಪೈಪೋಟಿ ನಡೆಸುವ ಉದ್ದೇಶದಿಂದ ಪ್ರಸ್ತುತ ಸಂಘಟನೆ ಕಾರ್ಯನಿರ್ವಹಿಸುತ್ತಿಲ್ಲ. ಸಂಘಟನೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಸಹರಿಸಿ..ಎಂದು ಸೂಚಿಸಿದರು .

ನೂತನ ಸಾರಥಿಗಳನ್ನು KSWA GCC ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಬಹ್ರೈನ್ ಘೋಷಿಸಿದರು,

ಅಧ್ಯಕ್ಷರಾಗಿ ಬಷೀರ್ ಸಅದಿ (ಚಾಮೆಯಾಲ್)
ಉಪಾಧ್ಯಕ್ಷರು
ಹಸೈನಾರ್ ಸಖಾಫಿ (ಕೊಂಡಂಗೇರಿ)
ಹಮೀದ್ RT ನಗರ್
ಹುಸೈನ್ ಸಖಾಫಿ (ಎಡಪ್ಪಲ)

ಪ್ರಧಾನ ಕಾರ್ಯದರ್ಶಿ:
ಹಮೀದ್ (ಕಬಡಕ್ಕೇರಿ)
ಸಹ ಕಾರ್ಯದರ್ಶಿಗಳು:
ಮಜೀದ್ ಮುಸ್ಲಿಯಾರ್
ಅಷ್ರಫ್ RMC
ಅಜೀಜ್ ಚಾಮೆಯಾಲ್

ಕೋಶಾಧಿಕಾರಿ:
ಹಂಸ (ಕೊಟ್ಟಮುಡಿ)

ಕೋಡಿನೇಟರ್: ತಾಜುದ್ದೀನ್ ಫಾಳಿಲಿ

ರಿಲೀಫ್ ವಿಂಗ್:
ಹಂಸ ಸಖಾಫಿ
ಸುಬೈರ್ ಮುಸ್ಲಿಯಾರ್

ಮೀಡಿಯಾ ವಿಂಗ್:
ರಿಯಾಸ್ ಮಾರ್ತಳ್ಳಿ
ನಾಸರ್ ಕುಂಜಿಲ
ಸಯೀದ್ ಎಮ್ಮೆಮಾಡು
ಮತ್ತು ಹತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಸಿದ್ದೀಖ್ ಝುಹ್ರಿ ಅಯ್ಯಂಗೇರಿ (KSWA ಸೌದಿ ರಾಷ್ಟ್ರೀಯ ಅಧ್ಯಕ್ಷರು)
ಹಸೈನಾರ್ ಸಖಾಫಿ (ಕೊಂಡಂಗೇರಿ) ಖಾಸಿಂ ಸಖಾಫಿ ಕೊಂಡಂಗೇರಿ(KSWA ಸೌದಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರು) ಹಮೀದ್ ಕಬಡಕ್ಕೇರಿ (ಮಾಜಿ ಅಧ್ಯಕ್ಷರು ಕೂಡಗು ಜಿಲ್ಲಾ ವಕ್ಫ್ ಬೋರ್ಡ್) ರವರು ಶುಭಹಾರೈಕೆ ಭಾಷಣಮಾಡಿದರು.

ತಾಜುದ್ದೀನ್ ಫಾಳಿಲಿ ಸ್ವಾಗತಿಸಿ ಹಂಸ ಸಖಾಫಿ ಕೊಟ್ಟಮುಡಿ ವಂದಿಸಿದರು.

error: Content is protected !! Not allowed copy content from janadhvani.com