janadhvani

Kannada Online News Paper

ಅವಧಿಗೂ ಮೊದಲೇ ಎಲ್‌ಪಿಜಿ ಅನಿಲ ಖಾಲಿಯಾಗಿದರೆ ಎಲ್ಲಿ ದೂರು ನೀಡಬೇಕು?

ನವದೆಹಲಿ:ಸಾಮಾನ್ಯವಾಗಿ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಎಷ್ಟು ದಿನ ಬರುತ್ತದೆ ಎಂಬುದು ತಿಳಿದಿರುತ್ತದೆ. ಸಾಮಾನ್ಯವಾಗಿ ಒಂದೆರಡು ದಿನ ವ್ಯತ್ಯಾಸವಾಗಬಹುದು. ಆದರೆ ಕೆಲವೊಮ್ಮೆ ಮನೆಯಲ್ಲಿ ಇಬ್ಬರೇ ಇದ್ದಾಗಲೂ ಕೇವಲ 10-12 ದಿನಗಳಿಗೆ ಗ್ಯಾಸ್ ಖಾಲಿಯಾಗಿರುವ ಬಗ್ಗೆಯೂ ಹಲವು ಉದಾಹರಣೆಗಳಿವೆ.

ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಅನಿಲ ಕಡಿಮೆಯಿರುವ ಬಗ್ಗೆ ನಿರಂತರ ದೂರುಗಳು ದಾಖಲಾಗುತ್ತಿರುತ್ತದೆ. ದೂರು ನೀಡಿದ ನಂತರವೂ ಎಲ್‌ಪಿಜಿ ಏಜೆನ್ಸಿ ಆಪರೇಟರ್ ಅಥವಾ ಡೆಲಿವರಿ ಮ್ಯಾನ್ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆದರೆ ಈಗ ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ.

ಈ ರೀತಿಯಾಗಿ ನಿಮ್ಮ ಮನೆಗೆ ತರಲಾಗಿರುವ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿಯಾಗಿದೆ ಎಂದಾದರೆ ನೀವು ಗ್ರಾಹಕ ವೇದಿಕೆಯಲ್ಲಿ ಗ್ಯಾಸ್ ಸಿಲಿಂಡರ್ ಸಮಯಕ್ಕೂ ಮೊದಲೇ ಖಾಲಿಯಾಗಿದೆ ಎಂದು ದೂರು ನೀಡಲು ಸಾಧ್ಯವಾಗುತ್ತದೆ. ಯಾವುದೇ ಅನಿಲ ವಿತರಕರು ಗ್ರಾಹಕರ ಹಕ್ಕುಗಳನ್ನು ಲೂಟಿ ಮಾಡಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಎಲ್‌ಪಿಜಿ ಸಿಲಿಂಡರ್ ಅವಧಿಗೂ ಮೊದಲೇ ಖಾಲಿಯಾಗಿದೆ ಎಂಬ ಬಗ್ಗೆ ಗ್ರಾಹಕರು ನೀಡಿದ ದೂರಿಗೆ ವಿತರಕರು ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಗ್ರಾಹಕರು ನೇರವಾಗಿ ಗ್ರಾಹಕ ವೇದಿಕೆಯಲ್ಲಿ ದೂರು ನೀಡಬಹುದು. ಒಂದು ತಿಂಗಳೊಳಗೆ ನಿಮ್ಮ ದೂರಿನ ಮೇಲೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ.ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಅನುಷ್ಠಾನದ ನಂತರ ಗ್ರಾಹಕರು ಕಡಿಮೆ ಎಲ್‌ಪಿಜಿ ಪಡೆದರೆ, ಎಲ್‌ಪಿಜಿ ವಿತರಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಅವರ ಪರವಾನಗಿಯನ್ನು ಸಹ ರದ್ದುಗೊಳಿಸಬಹುದು.

ಸಿಲಿಂಡರ್ ವಿತರಣೆಯನ್ನು ತೆಗೆದುಕೊಳ್ಳುವಾಗ ಹೆಚ್ಚಿನ ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ನ ತೂಕವನ್ನು ಪರೀಕ್ಷಿಸುವುದಿಲ್ಲ. ಎಲ್‌ಪಿಜಿ ತಲುಪಿಸುವ ವ್ಯಕ್ತಿಯು ಸರಬರಾಜು ಮಾಡುವಾಗ ತೂಕದ ಯಂತ್ರವನ್ನು ತನ್ನೊಂದಿಗೆ ಕೊಂಡೊಯ್ಯುವುದಿಲ್ಲ. ಗ್ರಾಹಕರು ಸಿಲಿಂಡರ್ ಅನ್ನು ತೂಕ ಮಾಡಲು ಒತ್ತಡವನ್ನು ಬೀರಿದರೆ, ಆಗ ಮಾತ್ರ ತೂಕ ಹಾಕುವ ಯಂತ್ರವನ್ನು ಜೊತೆಯಲ್ಲಿಯೇ ಕೊಂಡೊಯ್ಯಲಾಗುತ್ತದೆ. ಈ ರೀತಿಯಾಗಿ ಪ್ರತಿದಿನ ಸಾವಿರಾರು ಗ್ರಾಹಕರು ಯಾವುದೇ ತೂಕ ಪರಿಶೀಲಿಸದೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕೊಳ್ಳುತ್ತಾರೆ. ಆದರೆ ಹೊಸ ಕಾನೂನು ಇಂತಹ ಘಟನೆಗಳನ್ನು ತಡೆಯುತ್ತದೆ.