ಅಬುಧಾಬಿ :ಯುಎಇಯ ಸಂದರ್ಶಕ ಮತ್ತು ಪ್ರವಾಸಿ ವೀಸಾದಲ್ಲಿ ಉಳಿದಿರುವವರು ಆಗಸ್ಟ್ 12 ರೊಳಗೆ ದಂಡವಿಲ್ಲದೆ ದೇಶ ತೊರೆಯಬಹುದು ಎಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ಶಿಪ್ ಹೇಳಿದೆ.
ಜುಲೈ 12 ರಿಂದ, ಸಂದರ್ಶಕರಿಗೆ ದಂಡವಿಲ್ಲದೆ ಸ್ವದೇಶಕ್ಕೆ ಮರಳಲು ಒಂದು ತಿಂಗಳ ಅವಕಾಶವಿದೆ. ಅದರ ನಂತರ, ಅವರು ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಐಸಿಎ ವಕ್ತಾರ ಬ್ರಿಗೇಡಿಯರ್ ಖಮೀಸ್ ಅಲ್ಕಾಬಿ ಹೇಳಿದರು.
ನಿವಾಸ ವಿಸಾ ಹೊಂದಿರುವ ವಿದೇಶೀಯರು ಯುಎಇಗೆ ಹಿಂದಿರುಗಿದ ಬಳಿಕ,ದಾಖಲೆಗಳನ್ನು ಸರಿಪಡಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗುತ್ತದೆ.
ಮಾರ್ಚ್ 1 ರ ನಂತರ ವೀಸಾ ಅವಧಿ ಮುಗಿದವರಿಗೆ ಜುಲೈ 12 ರಿಂದ ವೀಸಾ ನವೀಕರಿಸಲು ಮತ್ತು ಅವರ ಎಮಿರೇಟ್ಸ್ ಐಡಿ ನವೀಕರಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯ ನಂತರ ಅವರು ದಂಡ ಪಾವತಿಸಬೇಕಾಗುತ್ತದೆ.
- ಮಾರ್ಚ್ ಅಥವಾ ಏಪ್ರಿಲ್ನಲ್ಲಿ ವೀಸಾ ಅವಧಿ ಮುಗಿದವರು ನವೀಕರಣಕ್ಕಾಗಿ ಈಗ ಅರ್ಜಿ ಸಲ್ಲಿಸಬಹುದು.
- ಮೇ ತಿಂಗಳಲ್ಲಿ ಅವಧಿ ಮುಗಿದವರು ಆಗಸ್ಟ್ 8 ರಿಂದ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಜೂನ್ 1 ರಿಂದ ಜುಲೈ 11 ರ ನಡುವೆ ವೀಸಾ ಅವಧಿ ಮುಗಿದವರು ಸೆಪ್ಟೆಂಬರ್ 10 ರ ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.
- ಜುಲೈ 12 ರ ನಂತರ ಅವಧಿ ಮುಗಿಯುವವರಿಗೆ ಯಾವುದೇ ವಿಶೇಷ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿಲ್ಲ.
ವೀಸಾ ಗಡುವನ್ನು ಡಿಸೆಂಬರ್ ಅಂತ್ಯಕ್ಕೆ ವಿಸ್ತರಿಸಲಾಗಿದೆ ಎಂಬ ಪ್ರಕಟಣೆಯನ್ನು ಈಗ ರದ್ದುಪಡಿಸಲಾಗಿದೆ.ica.gov.ae ವೆಬ್‌ಸೈಟ್ ಮೂಲಕ ಸೇವೆಗಳನ್ನು ಪಡೆಯಲು ಪ್ರಯತ್ನಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.