ಚಿಕ್ಕಮಗಳೂರು:ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಸಮಿತಿ ಕೇಂದ್ರ ಕಛೇರಿಯಲ್ಲಿ ಮೇ.22 ರಂದು ಜಿಲ್ಲಾ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಶಾಹಿದರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ದಿನಾಂಕ 24 ಅಥವಾ 25 ಮೇ ರಂದು ನಡೆಯಲಿರುವ ರಂಜಾನ್ ಈದ್ ಅನ್ನು ಈ ಬಾರಿ ರಾಜ್ಯ ಸರ್ಕಾರದ ಮಾರ್ಗದರ್ಶನವನ್ನು ಅನುಸರಿಸಿಕೊಂಡು ಜಿಲ್ಲಾ ಆಡಳಿತಕ್ಕೆ ಸಹಕಾರ ಕೊಟ್ಟು ಸರಳವಾಗಿ ಆಚರಿಸಬೇಕೆಂದು ಜಿಲ್ಲೆಯ ಎಲ್ಲಾ ಮಸೀದಿ ಆಡಳಿತ ಸಮಿತಿಯವರಿಗೆ ಮನವರಿಕೆ ಮಾಡಲಾಗುವುದು.
ಆಯಾ ಪ್ರದೇಶದ ಮಸಿದಿಗಳ ಅಧ್ಯಕ್ಷರು ಮತ್ತು ಇಮಾಮ್‌ರವರು ಸಾರ್ವಜನಿಕರಲ್ಲಿ ಮನವರಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಲಾಯಿತು . ಈ ಸಂದರ್ಭದಲ್ಲಿ ಕಾರ್ಯದರ್ಶಿಯವರಾದ ಹಾಜಿ ಫೈರೋಜ್ ಅಹಮ್ಮದ್ ರರವರು ಮಾತನಾಡಿ ಈ ಬಾರಿ ರಂಜಾನ್ ಹಬ್ಬದ ವಿಶೇಷ ನಮಾಜ್ ಅನ್ನು ಯಾವುದೇ ಮಸೀದಿ ಅಥವಾ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲವಾದ್ದರಿಂದ ಎಲ್ಲಾ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ದಿನ ತಮ್ಮ ತಮ್ಮ ಮನೆಯಲ್ಲಿಯೇ ನಮಾಜ್ ನಿರ್ವಹಿಸಬೇಕೆಂದು ಸರ್ಕಾರ ಮತ್ತು ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸರ್ಕಾರದೊಂದಿಗೆ ಸಹಕರಿಸಬೇಕಾಗಿ ಕರೆ ಕೊಡಲಾಯಿತು .
ಈ ಸಭೆಯಲ್ಲಿ ಸಮಿತಿಯ ಸಹಕಾರ್ಯದರ್ಶಿ ಮುನೀರ್ ಅಹಮ್ಮದ್ . ಚಿಕ್ಕಮಗಳೂರು ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಆರಿಫ್ ಅಲಿಖಾನ್ ಇನ್ನಿತರೆ ಧಾರ್ಮಿಕ ಮೂಖಂಡರು ಹಾಗೂ ಸುನ್ನಿ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು .