ಪುತ್ತೂರು : SSF ಬನ್ನೂರು ಶಾಖೆಯ ವತಿಯಿಂದ ಮರ್ಹೂಂ ಅಯ್ಯೂಬ್ ಖಾನ್ ಸಅದಿ ಹಾಗೂ ನಮ್ಮನಗಲಿದ ಸಹಕಾರ್ಯಕರ್ತ ಮರ್ಹೂಂ ಸಿರಾಜ್ ಅಲಿ ಬನ್ನೂರು ರವರ ಸ್ಮರಣಾರ್ಥ ಬನ್ನೂರು ಪ್ರಜ್ಙಾ ಹೀನ ಕೇಂದ್ರ ದಲ್ಲಿರುವ ವಿಶೇಷ ಚೇತನರಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಎಸ್ಸೆಸ್ಸೆಫ್ ಬನ್ನೂರು ಶಾಖೆ ಪ್ರಮುಖರು ಪುತ್ತೂರು ಸೆಕ್ಟರ್ ಕೋಶಾಧಿಕಾರಿ ಸೈಫುಲ್ಲಾ ಸಅದಿ ಬನ್ನೂರು, ಸುನ್ನಿ ಸೆಂಟರ್ ಕಾರ್ಯನಿರ್ವಾಹಕ ಸಮಿತಿ ಅಧ್ಯಕ್ಷರಾದ ಫಾರೂಕ್, ಎಸ್ ವೈ ಎಸ್ ಬನ್ನೂರು ಬ್ರಾಂಚ್ ಪ್ರಮುಖರಾದ ರಿಯಾಝ್ ಪಾಪ್ಲಿ, ಎಸ್ಸೆಸ್ಸೆಫ್ ಬನ್ನೂರು ಶಾಖಾಧ್ಯಕ್ಷರಾದ ಜಬೀರ್, ಪ್ರಧಾನ ಕಾರ್ಯದರ್ಶಿ ಉಲ್ಫತುಲ್ಲಾ, ಶಾಖಾ ಪ್ರಮುಖರಾದ ಝುಬೈರ್, ಹನೀಫ್ ಮೊದಲಾದವರು ಉಪಸ್ಥಿತರಿದ್ದರು.