ಮಕ್ಕತುಲ್ ಮುಕರ್ರಮಃ: ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟ ಮಕ್ಕಾ ಮದೀನಾ ಹರಮ್ ಮಸೀದಿಗಳು ಶೀಘ್ರದಲ್ಲೇ ಸಹಜ ಸ್ಥಿತಿಗೆ ಬರಲಿದೆ ಎಂದು ಎರಡೂ ಹರಂಗಳ ವ್ಯವಹಾರ ಇಲಾಖೆಯ ಮುಖ್ಯಸ್ಥ ಡಾ.ಅಬ್ದುಲ್ ರಹಮಾನ್ ಅಲ್-ಸುದೈಸ್ ಹೇಳಿದ್ದಾರೆ.
ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಪ್ರತಿಯೊಬ್ಬರಿಗೂ ಹರಂ ಪ್ರವೇಶಿಸಬಹುದು ಮತ್ತು ಕಅಬಾ ತ್ವವಾಫ್ ಗೆ ಶೀಘ್ರದಲ್ಲೇ ಅನುಮತಿ ನೀಡಲು ಸಾಧ್ಯವಾಗಲಿದೆ ಎಂದು ಅವರು ಆಶಿಸಿದ್ದಾರೆ.
ಹರಮ್ ತೆರೆದ ನಂತರ, ಕಟ್ಟುನಿಟ್ಟಾದ ಕೋವಿಡ್ ರಕ್ಷಣಾತ್ಮಕ ತಪಾಸಣೆಯ ನಂತರವೇ ಮಕ್ಕಾ ಮತ್ತು ಮದೀನಾ ಮಸೀದಿಗಳಿಗೆ ಪ್ರವೇಶ ದೊರೆಯಲಿದೆ.
ಕೋವಿಡ್ ಪ್ರತಿರೋಧದ ಭಾಗವಾಗಿ ಅಳವಡಿಸಲಾಗಿರುವ ವಿವಿಧ ಥರ್ಮಲ್ ಸ್ಕ್ಯಾನಿಂಗ್ ಉಪಕರಣಗಳು, ಓಝೋನ್ ಕ್ರಿಮಿನಾಶಕ ಉಪಕರಣಗಳು ಮತ್ತು ಅದರ ಹೊಂದಾಣಿಕೆಯನ್ನು ಪರಿಶೀಲಿಸಿ ಅವರು ಮಾತನಾಡುತ್ತಿದ್ದರು.
ಜನರ ಕ್ಷೇಮವನ್ನು ಮುಂದಿಟ್ಟಾಗಿದೆ ಆಡಳಿತಗಾರರ ಪ್ರಸ್ತುತ ನಿರ್ಧಾರ. ಎರಡೂ ಹರಂಗಳ ಉಸ್ತುವಾರಿ,ಸೌದಿ ಆಡಳಿತಗಾರ ದೊರೆ ಸಲ್ಮಾನ್ ರಾಜರು ಪರಿಸ್ಥಿತಿಯನ್ನು ನೇರವಾಗಿ ಅವಲೋಕಿಸುತ್ತಿದ್ದಾರೆ ಎಂದು ಶೈಖ್ ಸುದೈಸ್ ಹೇಳಿದರು.