ರಿಯಾದ್: ಸೌದಿ ಅರೇಬಿಯಾದಲ್ಲಿ ಕೋವಿಡ್‌ನಿಂದ ರಕ್ಷಣೆಯನ್ನು ಬಲಪಡಿಸಲು ಚೀನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಂಬತ್ತು ಮಿಲಿಯನ್ ಕೋವಿಡ್ ಟೆಸ್ಟ್ ನಡೆಸಲು ಒಪ್ಪಂದ ಮಾಡಲಾಗಿದೆ.
ಕೋವಿಡ್ ಪರೀಕ್ಷೆಗಾಗಿ ಈ ಎಲ್ಲಾ ಕಿಟ್‌ಗಳನ್ನು ಸೌದಿಗೆ ತಲುಪಿಸಲಾಗುತ್ತದೆ. ಇದಕ್ಕಾಗಿ ಸೌಲಭ್ಯಗಳನ್ನು ಚೀನಾದ ತಜ್ಞರ ತಂಡ ಸಿದ್ಧಪಡಿಸುತ್ತಿದ್ದು, 500 ಜನರ ನಿಯೋಗ ಚೀನಾದಿಂದ ಸೌದಿಗೆ ಪ್ರಯಾಣಿಸಲಿದೆ. ಇದರಲ್ಲಿ ವೈದ್ಯರು, ತಂತ್ರಜ್ಞರು ಮತ್ತು ಇತರರು ಸೇರಿದ್ದಾರೆ.
ಸೌದಿಯ ನ್ಯಾಷನಲ್ ಯೂನಿಫೈಡ್ ಪ್ರೊಕ್ಯೂರ್ಮೆಂಟ್ ಕಂಪನಿ(NUPCO) ಮತ್ತು ಚೀನಾದ ಬೀಜಿಂಗ್ ಜೀನೋಮ್ ಇನ್ಸ್ಟಿಟ್ಯೂಟ್ ನಡುವೆ ಒಪ್ಪಂದ ನಡೆದಿದ್ದು,ಇದರ ಭಾಗವಾಗಿ ಆರು ದೊಡ್ಡ ಮಟ್ಟದ ಪ್ರಾದೇಶಿಕ ಲ್ಯಾಬ್ಗಳನ್ನು ತೆರೆಯಲಾಗುತ್ತದೆ. ದಿನಂಪ್ರತಿ 60,000 ತಪಾಸಣೆ ಮಾಡಬಹುದಾದ ಮೊಬೈಲ್ ಲ್ಯಾಬೊರೇಟರಿ ಕೂಡ ಅದರ ಭಾಗವಾಗಲಿದೆ.
ಸೌದಿಯಾದ್ಯಂತ ಕೆಲವರಿಗೆ ತಂಡವು ಪರಿಶೀಲನೆ ನೀಡಲಿದ್ದು, ಅವರನ್ನು ದೈನಂದಿನ ತಪಾಸಣೆ ಮತ್ತು ಕ್ಷೇತ್ರ ಪರಿಶೀಲನೆಗೆ ಬಳಸಲಾಗುತ್ತದೆ. ಎಂಟು ತಿಂಗಳಲ್ಲಿ ಸರ್ವವೂ ಸಜ್ಜುಗೊಳ್ಳಲಿದೆ. 995 ಮಿಲಿಯನ್ ರಿಯಾಲ್‌ಗಳಿಗೆ ಚೀನಾದೊಂದಿಗೆ ಸೌದಿ ಅರೇಬಿಯಾ ಒಪ್ಪಂದ ಮಾಡಿಕೊಂಡಿದೆ.