ದೋಹಾ: ಖತರ್‌ನಲ್ಲಿ ಕೋವಿಡ್-19 ಹರಡುವುದನ್ನು ತಡೆಯುವ ಕ್ರಮಗಳ ಭಾಗವಾಗಿ ವಿದೇಶಗಳ ಎಲ್ಲಾ ವಿಮಾನಯಾನಗಳಿಗೆ ವಿಧಿಸಲಾದ ನಿರ್ಬಂಧವನ್ನು ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ. ಆದರೆ ಸ್ಥಳೀಯ ನಾಗರಿಕರ ಪ್ರವೇಶ ನಿಷೇಧಿಸಲಾಗಿಲ್ಲ. ವಿಮಾನ ನಿಲ್ದಾಣಕ್ಕೆ ಸರಕು ವಿಮಾನಗಳಿಗೆ ಪ್ರವೇಶ ಅನುಮತಿಸಲಾಗಿದೆ.
ಇತರ ದೇಶಗಳಿಂದ ದೋಹಾ ಮೂಲಕ ಹಾರಾಡುವ ವಿಮಾನಗಳು ದೋಹಾ ವಿಮಾನ ನಿಲ್ದಾಣದಲ್ಲಿ ಇಳಿಯುದಕ್ಕೆ ಅನುಮತಿ ನೀಡಲಾಗಿದೆ.ಆದರೆ ದೇಶದೊಳಗೆ ಪ್ರಯಾಣಿಕರನ್ನು ಇಳಿಸುವುದಕ್ಕೆ ಅನುಮತಿಯಿಲ್ಲ.
ದೇಶದ ಪ್ರಮುಖ ಕೈಗಾರಿಕಾ ಪ್ರದೇಶದ ಒಂದರಿಂದ 32 ವರೆಗಿನ ವಿಭಾಗಗಳಿಗೆ ಸಾರಿಗೆಯನ್ನು ಕೂಡ ಎರಡು ವಾರಗಳವರೆಗೆ ನಿರ್ಬಧಿಸಲಾಗಿದೆ. ಇಲ್ಲಿರುವ ಎಲ್ಲ ಕಾರ್ಮಿಕರಿಗೆ ಆಹಾರ, ಔಷಧಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸಲಿದ್ದೇವೆ ಎಂದು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ವಕ್ತಾರ ಲುಲ್ವಾ ಅಲ್ ಖತೀರ್ ಹೇಳಿದ್ದಾರೆ.