ರಿಯಾದ್: ಕರೋನ (ಕೋವಿಡ್ -19) ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಒಳಿತಿಗಾಗಿ ದೇಶದ ಎಲ್ಲಾ ಮಸೀದಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಸಚಿವ ಡಾ. ಅಬ್ದುಲ್ಲತೀಫ್ ಅಲ್-ಶೈಖ್ ಹೇಳಿದ್ದಾರೆ.
ಸೋಂಕಿತರು ಮಸೀದಿಗಳಿಗೆ ಹೋಗಬಾರದು ಎಂಬುದು ಇಸ್ಲಾಮಿಕ್ ವಿದ್ವಾಂಸರ ಅಭಿಪ್ರಾಯವಾಗಿದೆ. ಅನಾರೋಗ್ಯಕ್ಕೆ ಈಡಾಗುವ ಬಗ್ಗೆ ಹೆದರುವವರು ಕೂಡ ಮಸೀದಿಗಳಿಗೆ ಹೋಗಬಾರದು ಮತ್ತು ಅಂತಹ ಜನರು ಮನೆಯಲ್ಲಿಯೇ ನಮಾಝ್ ನಿರ್ವಹಿಸಬಹುದು ಎಂದು ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದರು.
ಧಾರ್ಮಿಕ ವ್ಯವಹಾರಗಳ ಸಚಿವಾಲಯದ ನಿರ್ದೇಶನ ಮತ್ತು ನಿಯಮಗಳನ್ನು ಪಾಲಿಸದ ಇಮಾಮ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರನ್ನು ಕಾನೂನಿನ ಮುಂದೆ ತರಲಾಗುವುದು ಎಂದು ಅಬ್ದುಲ್ಲತೀಫ್ ಅಲ್-ಶೈಖ್ ಎಚ್ಚರಿಸಿದ್ದಾರೆ.