ರಿಯಾದ್: ಸೌದಿ ಅರೇಬಿಯಾಗೆ ಆನ್ ಅರೈವಲ್ ಪ್ರವಾಸಿ ವೀಸಾ ಪಡೆಯಲು ಹೊಸ ಷರತ್ತು ವಿಧಿಸಲಾಗಿದ್ದು, ಆಗಮನದ ಪ್ರವಾಸಿ ವೀಸಾ ಸೌದಿ ವಿಮಾನಗಳಲ್ಲಿ ಆಗಮಿಸಿದವರಿಗೆ ಮಾತ್ರ ಲಭ್ಯವಾಗಲಿದೆ. ಹೊಸ ನಿಯಮಗಳು ಯುಎಸ್ ಮತ್ತು ಯುಕೆ ವೀಸಾಗಳು ಮತ್ತು ಷೆಂಗೆನ್ ವೀಸಾಗಳನ್ನು ಹೊಂದಿರುವವರಿಗೆ ಅನ್ವಯವಾಗುತ್ತವೆ.
ಕಳೆದ ವರ್ಷ ಸೆಪ್ಟೆಂಬರ್ 27 ರಿಂದ ಸೌದಿಗೆ ಆಗಮಿಸುವ ಪ್ರವಾಸಿ ವೀಸಾ ಜಾರಿಗೆ ಬಂದಿತು. 49 ದೇಶಗಳ ಜನರಿಗೆ ಮಾತ್ರ ಸೀಮಿತಗೊಳಿಸಲಾಗಿದ್ದ ಈ ಸೌಕರ್ಯವನ್ನು, ಯುಎಸ್, ಯುಕೆ ಮತ್ತು ಷೆಂಗೆನ್‌ಗಳ ವೀಸಾ ಮತ್ತು ಯೂರೋಪ್ ಒಕ್ಕೂಟ ದೇಶಗಳಿಗೆ ಪ್ರವೇಶ ವಿಸಾ ಹೊಂದಿರುವವರಿಗೆ ಜನವರಿ 1ರಿಂದ ಸೌದಿ ಅರೇಬಿಯಾದಲ್ಲಿ ಆನ್ ಅಲೈವಲ್ ಪ್ರವಾಸಿ ವೀಸಾಗಳನ್ನು ನೀಡಲಾಗುತ್ತಿದೆ.
ಆದಾಗ್ಯೂ, ಯುಎಸ್ ಮತ್ತು ಯುಕೆ ಮತ್ತು ಷೆಂಗೆನ್ ವೀಸಾಗಳನ್ನು ಹೊಂದಿರುವವರು ವಿದೇಶಿ ವಿಮಾನಗಳಲ್ಲಿ ಬಂದಲ್ಲಿ ವಿಸಾ ಲಭಿಸುವುದಿಲ್ಲ, ಸೌದಿ ಏರ್ಲೈನ್ಸ್, ಫ್ಲೈ ನಾಸ್, ಫ್ಲೈ ಅದೀಲ್ ಮತ್ತು ಸೌದಿ ಗಲ್ಫ್ ಏರ್ಲೈನ್ಸ್ ಮೂಲಕ ಸೌದಿಗೆ ಪ್ರಯಾಣಿಸಿರುವ ಪ್ರವಾಸಿಗರು ಮಾತ್ರ ರಿಯಾದ್, ಜಿದ್ದಾ ಮತ್ತು ದಮ್ಮಾಮ್ ವಿಮಾನ ನಿಲ್ದಾಣಗಳಿಂದ ಆನ್-ಅರೈವಲ್ ವೀಸಾಗಳನ್ನು ಪಡೆದು, ಸೌದಿಯಲ್ಲಿ ಎಲ್ಲಿಗೆ ಬೇಕಾದರೂ ಪ್ರಯಾಣಿಸಲು ಅವಕಾಶವಿದೆ.