ರಿಯಾದ್: ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ವಿದೇಶಿ ಕಾರ್ಮಿಕರ ಪರೀಕ್ಷಣಾವಧಿಯನ್ನು( ಪ್ರೊಬೇಷನ್ ಪಿರೇಡ್) ಆರು ತಿಂಗಳವರೆಗೆ ವಿಸ್ತರಿಸಲು ಅನುಮತಿ ನೀಡಲಾಗಿದೆ. ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ವಾರ್ಷಿಕ ರಜೆಯ ಬದಲಾಗಿ ಹಣವನ್ನು ಸ್ವೀಕರಿಸುವುದು ಕಾನೂನುಬಾಹಿರ ಎಂದು ತಿಳಿಸಿದೆ.
ಖಾಸಗಿ ವಲಯದ ಕಾರ್ಮಿಕರ ಪರೀಕ್ಷಣಾವಧಿಯು ಮೂರು ತಿಂಗಳು ಆಗಿದ್ದವು. ಆದರೆ ಇದನ್ನು ಕಾರ್ಮಿಕರ ಅನುಮತಿಯೊಂದಿಗೆ 6 ತಿಂಗಳವರೆಗೆ ವಿಸ್ತರಿಸಬಹುದು. ಅಗತ್ಯವಿದ್ದರೆ, ಷರತ್ತುಗಳಿಗೆ ಅನುಗುಣವಾಗಿ ಆರು ತಿಂಗಳಿಗಿಂತ ಹೆಚ್ಚು ವಿಸ್ತರಿಸಲು ಕೂಡ ಅನುಮತಿ ಇದೆ.
ಆದರೆ ಈ ಹಿಂದೆ ನೇಮಕ ಮಾಡಿದ ಅದೇ ಉದ್ಯೋಗದಲ್ಲಿ, ಆರು ತಿಂಗಳಿಗಿಂತ ಹೆಚ್ಚು ಕಾಲ ಪರೀಕ್ಷಣಾವಧಿಯಾಗಿ ನೇಮಿಸಿಕೊಳ್ಳಲು ಕಾನೂನು ಅನುಮತಿಸುವುದಿಲ್ಲ. ಕಾರ್ಮಿಕರ ವೇತನದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚಿನದನ್ನು ಬಾಕಿ ಉಳಿಸಲು ಕಾರ್ಮಿಕರಿಂದ ಲಿಖಿತ ಅನುಮತಿಯನ್ನು ಪಡೆದಿರಬೇಕು.
ಖಾಸಗಿ ವಲಯದ ಉದ್ಯೋಗಿಗಳಿಗೆ ವರ್ಷಕ್ಕೆ 21 ದಿನಗಳ ವಾರ್ಷಿಕ ರಜೆ ಮತ್ತು ಉದ್ಯೋಗದಾತರ ಅಡಿಯಲ್ಲಿ 5 ವರ್ಷಗಳನ್ನು ಪೂರೈಸಿದ ಕಾರ್ಮಿಕನಿಗೆ ವರ್ಷಕ್ಕೆ 30 ದಿನಗಳ ವೇತನ ಸಹಿತ ರಜೆಗೆ ಅವಕಾಶವಿದೆ. ವಾರ್ಷಿಕ ರಜೆಯನ್ನು ಸ್ವಯಂಪ್ರೇರಣೆಯಿಂದ ಉಪೇಕ್ಷಿಸುವುದು ಅಥವಾ ರಜೆಯ ಬದಲಾಗಿ ಹಣವನ್ನು ಪಡೆಯುವುದು ಕಾನೂನು ಬಾಹಿರವಾಗಿದೆ. ರಜಾದಿನಗಳಲ್ಲಿ ಇನ್ನೊಬ್ಬ ಉದ್ಯೋಗದಾತನಡಿಯಲ್ಲಿ ಕೆಲಸ ಮಾಡುವುದು ಕೂಡ ಕಾನೂನುಬಾಹಿರ ಎಂದು ಸಚಿವಾಲಯ ಹೇಳಿದೆ.