ಮಂಗಳೂರು : ದ ಕ ಜಿಲ್ಲೆಯ ಎ.ಪಿ. ಮತ್ತು ಈ.ಕೆ. ವಿಭಾಗದ ನಾಯಕರುಗಳಿರುವ ಸುನ್ನೀ ಐಕ್ಯ ವೇದಿಕೆ ಎಂಬ ವಾಟ್ಸಪ್ ಗ್ರೂಪೊಂದರಲ್ಲಿ ಮಂಗಳೂರು ಖಾಝಿಯವರ ಕುರಿತು ಯಾರೋ ಕಿಡಿಗೇಡಿಗಳು ಬರೆದ ಮೆಸೇಜೊಂದನ್ನು ಹಸನ್ ಝುಹ್ರೀ ಮಂಗಳಪೇಟೆಯವರು ಶೇರ್ ಮಾಡಿ ಅದರ ನಿಜಾಂಶವೇನೆಂದು ಕೇಳಿದ್ದಕ್ಕಾಗಿ ಅವರ ಮೇಲೆಯೇ ಮಂಗಳೂರು ಉತ್ತರ ಪೋಲೀಸ್ ಸ್ಟೇಷನ್ ನಲ್ಲಿ ದೇಶದ್ರೋಹ ಕೇಸು ದಾಖಲಿಸಲಾಗಿದೆ. ಅಮಾಯಕ ಉಸ್ತಾದರ ಮೇಲೆ ದೇಶದ್ರೋಹ ಕೇಸು ದಾಖಲಿಸಿದ್ದನ್ನು ಸುನ್ನೀ ರೈಟರ್ಸ್ ಕ್ಲಬ್ SWC ತೀವ್ರವಾಗಿ ಖಂಡಿಸಿದೆ.
ಈ ಕೇಸು ದಾಖಲಿಸುವುದರಲ್ಲಿ ಮಂಗಳೂರು ಖಾಝಿ ಮತ್ತು ಸೆಂಟ್ರಲ್ ಕಮಿಟಿಯ ಪ್ರಧಾನ ವ್ಯಕ್ತಿಯೊಬ್ಬರು ಶಾಮೀಲಾಗಿದ್ದಾರೆಂದು ಸುನ್ನೀ ನಾಯಕರ ಗಮನಕ್ಕೆ ಬಂದಿದೆ. ಮದ್ರಸಾದಲ್ಲಿ ಕಡಿಮೆ ವೇತನಕ್ಕೆ ಕೆಲಸ ಮಾಡುವ ಒಬ್ಬ ಬಡ ಮುಅಲ್ಲಿಮರೊಬ್ಬರ ಮೇಲೆ ಮೂರು ವರ್ಷಗಳವರೆಗೆ ಜಾಮೀನು ರಹಿತ ಶಿಕ್ಷೆಯಾಗುವ ದೇಶದ್ರೋಹದಂತಹಾ ಕಠಿಣ ಕೇಸು ದಾಖಲಿಸಿದ್ದನ್ನು ಖಂಡಿಸಿದ್ದು ಅಕ್ಷಮ್ಯ ಅಪರಾಧವಾಗಿದೆಯೆಂದು ನಾಯಕರು ವ್ಯಕ್ತಪಡಿಸಿದ್ದಾರೆ.