ಪುತ್ತೂರು, ನ.16 :- ಸುಲ್ತಾನ್ ಫ್ರೆಂಡ್ಸ್ ಮುಕ್ವೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಸಹಭಾಗಿತ್ವದಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ 217 ನೇ ರಕ್ತದಾನ ಶಿಬಿರವು ಮುಕ್ವೆಯಲ್ಲಿ ನಡೆಯಿತು.
ಮರ್ಹೂಂ ಝಿಯಾದ್ ಮುಕ್ವೆ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ ರಹ್ಮಾನಿಯ ಜುಮಾ ಮಸೀದಿ ಮುಕ್ವೆ ಇದರ ಖತೀಬರಾದ ಸಯ್ಯದ್ ಹಬೀಬುರ್ರಹ್ಮಾನ್ ತಂಘಳ್ ದುವಾದ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ರೋಟರಿ ಸೆಂಟ್ರಲ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಅವರು ಮಾತನಾಡಿ, ರಕ್ತದಾನದಲ್ಲಿ ಜೀವ ಉಳಿಸುವ ಪ್ರಕ್ರಿಯೆಗಿಂತಲೂ ಮುಖ್ಯವಾಗಿ ಮಾನವೀಯತೆಯ ಬೆಸುಗೆಯನ್ನು ಪರಸ್ಪರ ಎಲ್ಲಾ ಜಾತಿ ಧರ್ಮಗಳ ಮಧ್ಯೆ ಬೆಸೆಯುವುದಾಗಿದೆ ಎಂದರು.
ಮುಖ್ಯ ಅತಿಥಿಗಳಾದ ನೂರುಲ್ ಹುದಾ ಮಸೀದಿ ಬಪ್ಪಳಿಗೆಯ ಖತೀಬರಾದ ನಯೀಂ ಫೈಝಿ ಮುಕ್ವೆ ಮಾತನಾಡಿ ಸ್ಥಳೀಯ ಯುವಕರ ಸಾಮಾಜಿಕ ಚಿಂತನೆಯನ್ನು ಶ್ಲಾಘಿಸಿ ನಾಡಿನ ಅಭ್ಯುದಕ್ಕೆ ಇದುವೇ ಪೂರಕವಾಗಲಿ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಅವರು ಮಾತನಾಡಿ ರಕ್ತದಾನದ ಮಹತ್ವದ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಯುವುದರೊಂದಿಗೆ ಪ್ರತಿಯೊಬ್ಬ ರಕ್ತದಾನಿಯ ಆರೋಗ್ಯ ವೃದ್ದಿಯಾಗುತ್ತದೆ ಆದ್ದರಿಂದಲೇ ರಕ್ತದಾನಿಗಳು ಯಾವತ್ತೂ ಮಾರಕ ರೋಗಗಳಿಂದ ಬಲುದೂರ ಎಂದರು.
ವೇದಿಕೆಯಲ್ಲಿ ಆರ್.ಜೆ.ಎಂ ಮುಕ್ವೆ ಇದರ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ ಮೈಸೂರು,ಮಸೀದಿ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಬಾಲಾಯ ,ತಾಲೂಕು ಪಂಚಾಯತ್ ಸದಸ್ಯರಾದ ಪರಮೇಶ್ವರ ಭಂಡಾರಿ ,ಸಹರಾ ಅರ್ಥ್ ಮೂವರ್ಸ್ ಮಾಲಕರಾದ ಜಮಾಲುದ್ದೀನ್ ಹಾಜಿ ,ಆರ್.ಜೆ.ಎಮ್ ಇದರ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಬೆದ್ರಾಳ,ಉದ್ಯಮಿಗಳಾದ ಉಮ್ಮರ್ ಬದಿನಾರ್,ಭಾಗ್ಯೋದಯ ಇಂಡಸ್ಟ್ರೀಸ್ ಮಾಲಕರಾದ ರವಿ ಎಂ,ಎಸ್ಡಿಪಿಐ ನರಿಮೊಗರು ವಲಯ ಅಧ್ಯಕ್ಷರಾದ ಸಿರಾಜ್ ಬಾಬ,ಎಸ್ ಕೆ ಎಸ್ ಎಸ್ ಎಫ್ ಮುಕ್ವೆ ಅಧ್ಯಕ್ಷರಾದ ರಝಾಕ್ ಸರಳಿಕಟ್ಟೆ,ಎ ಆರ್ ರೆಸಿಡೆನ್ಸಿ ಮಾಲಕರಾದ ಅಶ್ರಫ್ ಗ್ಯಾಲಕ್ಸಿ,ಹಿಮಾಯತುಲ್ ಇಸ್ಲಾಂ ಮದ್ರಸ ಅಧ್ಯಕ್ಷರಾದ ಅಬ್ದುಲ್ ಕುಂಞಿ ಪುರುಷರಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 73 ಮಂದಿ ರಕ್ತದಾನ ಮಾಡಿ ಜೀವದಾನಿಗಳಾಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯನಿರ್ವಾಹಕರುಗಳಾದ ಫಾರೂಕ್ ಬಿಗ್ ಗ್ಯಾರೇಜ್ ,ಇಮ್ರಾನ್ ಉಪ್ಪಿನಂಗಡಿ ,ಹಫೀಝ್ ಕೆ.ಸಿ ರೋಡ್ ,ಮುಕ್ತಾರ್ ಕುಂಬ್ರ ಉಪಸ್ಥಿತರಿದ್ದರು.ಸುಲ್ತಾನ್ ಫ್ರೆಂಡ್ಸ್ ಮುಕ್ವೆ ಇದರ ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮವನ್ನು ಸುಲ್ತಾನ್ ಫ್ರೆಂಡ್ಸ್ ಮುಕ್ವೆ ಇದರ ಗೌರವಾಧ್ಯಕ್ಷರಾದ ಪಿ ಎಮ್ ಅಶ್ರಫ್ ಮುಕ್ವೆ ಸ್ವಾಗತಿಸಿ ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯ ನಿರ್ವಾಹಕರಾದ ರಝಾಕ್ ಸಾಲ್ಮರ ನಿರೂಪಿಸಿ ವಂದಿಸಿದರು.