janadhvani

Kannada Online News Paper

ಡಿಕೆಶಿ ಬಂಧನ: ರಾಜ್ಯನಾಯಕರ ಹೋರಾಟ ಸಾಲದು- ಸೋನಿಯಾ ಅಸಮಧಾನ

ಬೆಂಗಳೂರು: ಡಿ.ಕೆ.ಶಿವಕುಮಾರ್ ಬಂಧನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ವಿಚಾರದಲ್ಲಿ ತಟಸ್ಥವಾಗಿರುವ ಮಾಜಿ ಸಿಎಂ ಸಿದ್ಧರಾಮಯ್ಯನವರಿಗೆ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.

ಹೌದು ಡಿಕೆಶಿ ವಿಚಾರವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಜಿ ಸಿಎಂ ಹಾಗೂ ಸಿಎಲ್ಪಿ ನಾಯಕ ಸಿದ್ಧರಾಮಯ್ಯನವರ ಜೊತೆ ಐದು ನಿಮಿಷಗಳ ಕಾಲ ಚರ್ಚೆ ನಡೆಸಿದ್ದು, ಡಿಕೆಶಿಯವರ ಪರ ನಡೆಯುತ್ತಿರುವ ಹೋರಾಟ, ಪ್ರತಿಭಟನೆಗಳು ಸಾಕಾಗುತ್ತಿಲ್ಲ ಎಂಬ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಸಿಎಲ್ಪಿ ನಾಯಕರಾಗಿ ನಿಮ್ಮ ಹೋರಾಟ ಸಾಕಾಗುತ್ತಿಲ್ಲ ಎಂದು ನೇರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಸೋನಿಯಾಗಾಂಧಿಯವರು, ಪ್ರತಿ ವಿಧಾನಸಭಾವಾರು ಹೋರಾಟ ನಡೆಸೋದು ನಿಮ್ಮ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ಕರ್ನಾಟಕದಾದ್ಯಂತ ವಿಧಾನಸಭಾವಾರು ನಡೆಯುವ ಹೋರಾಟವನ್ನು ವಹಿಸಿಕೊಂಡು, ಇಡಿ ಕರ್ನಾಟಕವೇ ಡಿಕೆಶಿ ಪರ ನಿಲ್ಲುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದೇ ಎಂದು ಸಿದ್ಧುಗೆ ಸೋನಿಯಾ ಹೇಳಿದ್ದಾರೆ. ಡಿಕೆಶಿ ಬಂಧನವಾದಾಗಿನಿಂದಲೂ ಸೋನಿಯಾ ಗಾಂಧಿಯವರು ಡಿಕೆಶಿ ಕುಟುಂಬದ ಜೊತೆ ನಿಂತಿದ್ದು, ಈಗಾಗಲೇ ಡಿ.ಕೆ.ಸುರೇಶ್ ಜೊತೆಯೂ ಮಾತನಾಡಿ ಧೈರ್ಯ ಹೇಳಿದ್ದಾರೆ.

error: Content is protected !! Not allowed copy content from janadhvani.com