janadhvani

Kannada Online News Paper

ಯುಎಇ: ರಜಾ ದಿನಗಳ ಪಟ್ಟಿ ತಿದ್ದುಪಡಿ – ಮೀಲಾದುನ್ನಬಿಗೆ ರಜೆ

ಅಬುಧಾಬಿ: ಈ ವರ್ಷ ಯುಎಇಯಲ್ಲಿ ರಜಾದಿನಗಳ ನವೀಕರಿಸಿದ ಪಟ್ಟಿಯನ್ನು ಫೆಡರಲ್ ಅಥಾರಿಟಿ ಫಾರ್ ಗವರ್ನಮೆಂಟ್ ಹ್ಯೂಮನ್ ರಿಸೋರ್ಸ್ ಬಿಡುಗಡೆ ಮಾಡಿದೆ. ಈ ಹಿಂದೆ ತಿಳಿಸಿರುವುದಕ್ಕೆ ಬದಲಾಗಿ ಸ್ಮರಣೆ ದಿನವು ನವೆಂಬರ್ 30 ರ ಶನಿವಾರವಾಗಲಿದೆ. ಡಿಸೆಂಬರ್ 1ರ ರವಿವಾರ ರಜೆ ಎಂದು ಈ ಹಿಂದೆ ಘೋಷಿಸಲಾಗಿತ್ತು.

ಹೊಸ ಅಧಿಸೂಚನೆಯಂತೆ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ನವೆಂಬರ್ 30 ರಂದು ರಜೆ ಇರಲಿವೆ.

ಮೀಲಾದುನ್ನೆಬಿ ದಿನಾಚರಣೆ ಪ್ರಯುಕ್ತ (ಅರೇಬಿಕ್ ತಿಂಗಳು ರಬಿಯುಲ್-ಅವ್ವಲ್ -12) ರಜೆಯನ್ನೂ ನೀಡಲಾಗುತ್ತಿದೆ ಈ ಹಿಂದೆ ಪ್ರಕಟಿಸಿದ ಪಟ್ಟಿಯಲ್ಲಿ ಮೀಲಾದುನ್ನಬಿ ರಜೆಯನ್ನು ಕೈಬಿಡಲಾಗಿತ್ತು. ಇದಲ್ಲದೆ, ನವೆಂಬರ್ 30, ಹುತಾತ್ಮರ ದಿನ ಮತ್ತು ಯುಎಇ ರಾಷ್ಟ್ರೀಯ ದಿನವಾದ ಡಿಸೆಂಬರ್ 2 ಮತ್ತು 3 ರಂದು ರಜೆ ಲಭ್ಯವಾಗಲಿದೆ.

error: Content is protected !! Not allowed copy content from janadhvani.com