ರಿಯಾದ್: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಿಯಾದ್ ಸಮಿತಿ ಇದರ ವಾರ್ಷಿಕ ಮಹಾಸಭೆ ಮತ್ತು ಮಾಸಿಕ ಸ್ವಲಾತ್ ಮಜ್ಲಿಸ್ ಆಗಸ್ಟ್ 29 ರಂದು ಅಲ್ ಮಾಸ್ ರೆಸ್ಟೋರೆಂಟ್ ನಲ್ಲಿ ನಡೆಯಲಾಯಿತು.
ಸಯ್ಯಿದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ ಸುಲೈಮಾನ್ ಸಅದಿ, ಹಂಝ ಮುಸ್ಲಿಯಾರ್ ಪೊನ್ನಂಪೇಟೆ ಇವರು ಸ್ವಲಾತ್ ಮಜ್ಲಿಸಿಗೆ ನೇತೃತ್ವ ನೀಡಿದರು. ನಂತರ KSWA ರಿಯಾದ್ ಸಮಿತಿಯ ವಾರ್ಷಿಕ ಸಭೆಯನ್ನು ಸಯ್ಯಿದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಾಯಿತು. ಹಂಝ ಉಸ್ತಾದ್ ಚೋಕಂಡಳ್ಳಿ ಸ್ವಾಗತಿಸಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸಿದ್ದೀಖ್ ಝುಹ್ರಿ ಅವರು ಉದ್ಘಾಟಿಸಿದರು.
KSWA ಸಂಘಟನೆಯ ಕುರಿತು ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ಅರ್ಥ ಪೂರ್ಣವಾದ ತರಬೇತಿ ನಡೆಸಿ ಸದಸ್ಯರುಗಳ ಮನವನ್ನು ಸಂಘಟನೆಯತ್ತ ಓಲೈಸಿದರು.ನಂತರ ಹೊಸ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸಯ್ಯಿದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಎಮ್ಮೆಮಾಡು, ಖಜಾಂಚಿಯಾಗಿ ಹಂಝ ಉಸ್ತಾದ್ ಚೋಕಂಡಳ್ಳಿ ಮತ್ತು 10 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ಈ ವರ್ಷ ಹಜ್ಜ್ ನಿರ್ವಹಿಸಲು ಊರಿನಿಂದ ಆಗಮಿಸಿದವರಿಗೆ ಸ್ವಯಂ ಸೇವಕರಾಗಿ ಹೋಗಿದ್ದ KSWA ಸದಸ್ಯರುಗಳಾದ ಅಬ್ಬಾಸ್ ಹಾಜಿ ಹಾಕತ್ತೂರು, ಮುಸ್ತಫ ಝೈನಿ ಕಂಬಿಬಾಣೆ, ಸತ್ತಾರ್ ಚಾರಂಬಾಣೆ, ಖಾದರ್ ಎಮ್ಮೆಮಾಡು ರವರನ್ನು ಸನ್ಮಾನಿಸಲಾಯಿತು.
ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸದಸ್ಯ ರಫೀಖ್ ತಂಙಳ್ ಮಾಲ್ದಾರೆ, ಸಹ ಕಾರ್ಯದರ್ಶಿ ಸಮದ್ ಕೊಟ್ಟಮುಡಿ KSWA ದಮ್ಮಾಮ್ ಝೋನಲ್ ಪ್ರಧಾನ ಕಾರ್ಯದರ್ಶಿ ನಿಝಾಂ ಅಂಬಟ್ಟಿ ದಮ್ಮಾಮ್ ಝೋನಲ್ ವೆಲ್ಫೇರ್ ಚೆಯರ್ಮೇನ್ ಆದಂ ಕಂಡಕ್ಕರೆ ಉಪಸ್ಥಿತರಿದ್ದರು.