✍ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.
———————————————–
ದಿನದಿಂದ ದಿನಕ್ಕೆ ರಕ್ತದ ಅವಶ್ಯಕತೆ ಹೆಚ್ಚುತ್ತಿದ್ದು, ಇಂತಹ ಪರಿಸ್ಥಿತಿಯನ್ನು ಮನಗಂಡು, ಸಕಾಲದಲ್ಲಿ ರಕ್ತದ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ದ.ಕ ಜಿಲ್ಲಾ SSF ಹುಟ್ಟು ಹಾಕಿದ ವಿಂಗ್ ಆಗಿದೆ ಬ್ಲಡ್ ಸೈಬೋ. ಇಂದು ಅದು ಮಹತ್ತರವಾದ ಮೈಲುಗಳ್ಳೊಂದನ್ನು ದಾಟುತ್ತಿದೆ. ನಾಳೆ (18/8/19) ಮಂಗಳೂರಿನ ಪುರಭವನದಲ್ಲಿ ಜಿಲ್ಲೆಯ ಪ್ರತಿಷ್ಟಿತ 5 ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ದ.ಕ ಬ್ಲಡ್ ಸೈಬೋ ದ ನೂರನೇ ಕ್ಯಾಂಪ್ ಬೃಹತ್ ರಕ್ತದಾನ ಶಿಬಿರ ನಡೆಯಲಿದ್ದು, ಇದು ದ.ಕ ಜಿಲ್ಲೆಯ ಮಟ್ಟಿಗೆ ಒಂದು ಮಹತ್ಸಾಧನೆಯೂ ಹೌದು.

ಬ್ಲಡ್ ಸೈಬೋ ವನ್ನು ಅಧಿಕೃತವಾಗಿ ಹುಟ್ಟುಹಾಕಿದ ನಂತರ ಈ ಎರಡು ವರ್ಷಗಳ ಅವಧಿಯಲ್ಲಿ, ಜಿಲ್ಲಾ ಮಟ್ಟದಲ್ಲಿ 100 ರಷ್ಟು ಬ್ಲಡ್ ಕ್ಯಾಂಪ್ ನಡೆಸಲಾಗಿದ್ದು, ಆ ಮೂಲಕ ಇದುವರೆಗೂ 7 ಸಾವಿರ ಕ್ಕೂ ಮಿಕ್ಕ ರಕ್ತದಾನ ಮಾಡಲಾಗಿದೆ.
ಮೊದಮೊದಲು ಡಿವಿಶನ್ ಮಟ್ಟದಲ್ಲಿ ಪ್ರಾರಂಭವಾದ ಬ್ಲಡ್ ಕ್ಯಾಂಪ್, ನಂತರ ಸೆಕ್ಟರ್ ಶಾಖಾ ಮಟ್ಟದಲ್ಲೂ ಪ್ರತೀ ಮೂರ್ನಾಲ್ಕು ತಿಂಗಳಿಗೊಮ್ಮೆ ನಡೆಸುತ್ತಾ ಬರುತ್ತಿದೆ.
ರಕ್ತದ ಅವಶ್ಯಕತೆಯ ವಿಷಯಕ್ಕೆ ಬಂದಾಗ, ಎಲ್ಲರ ಬಾಯಲ್ಲೂ ಮನೆಮಾತಾಗಿರುವ ಹೆಸರೇ SSF ದ.ಕ ಬ್ಲಡ್ ಸೈಬೋ. ಇಂತಹ ಒಂದು ಸಾಧನೆಯ ಮಾಷ್ಟರ್ ಮೈಂಡ್ ಆಗಿ ಕಾರ್ಯ ನಿರ್ವಹಿಸಿದವರು, ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರಾಗಿದ್ದ, ಕಳೆದ ವರ್ಷ SSF ದ.ಕ ಜಿಲ್ಲಾದ್ಯಕ್ಷರಾಗಿದ್ದ ಸಿರಾಜುದ್ದೀನ್ ಸಖಾಫಿ, ಕನ್ಯಾನ ರವರು. ಅಂದಿನಿಂದ ಇಂದಿನವರೆಗೂ ಬ್ಲಡ್ ಸೈಬೋದ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿದವರು ಕರೀಂ ಕದ್ಕಾರ್ ರವರಾಗಿದ್ದಾರೆ. ಇವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬರುತ್ತಿರುವ ಹಾಲಿ ದ.ಕ ಜಿಲ್ಲಾ ಸಮಿತಿ ಎಲ್ಲಾ ರೀತಿಯಲ್ಲೂ ಅಭಿನಂದನೆಗೆ ಅರ್ಹವಾಗಿದೆ. ದ.ಕ ಜಿಲ್ಲಾ ಸಮಿತಿಗೆ, ಡಿವಿಶನ್ ಸೆಕ್ಟರ್ ಮತ್ತು ಶಾಖೆಗಳೂ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದುದರ ಫಲವೇ, ಇಂದು ಬೃಹತ್ ಹೆಮ್ಮರವಾಗಿ ಬೆಳೆದು ನಿಂತಿರುವ ನಮ್ಮ ನಿಮ್ಮೆಲ್ಲರ ಹೆಮ್ಮೆಯ ದ.ಕ ಬ್ಲಡ್ ಸೈಬೋ.
ಇದರ ಯಶಸ್ವಿ ಕಂಡು ನಾವು ಕೇವಲ ಕಣ್ತುಂಬಿಕೊಂಡರಷ್ಟೇ ಸಾಲದು. ಇದು ಇನ್ನಷ್ಟು ಬೆಳೆಯಲು, ಈ ಸಾಧನೆ ಮುಂದುವರೆಸಿಕೊಂಡು ಹೋಗಲು ನಮ್ಮಿಂದಾಗುವ ಗರಿಷ್ಠ ಮಟ್ಟದ ಸಹಕಾರವನ್ನು ಕೂಡಾ ನೀಡಬೇಕು. ರಕ್ತದಾನ ಶಿಬಿರದಲ್ಲಿ ಎಷ್ಟು ಬಾಟಲ್ ರಕ್ತ ಶೇಕರಣೆಯಾಗುತ್ತಿದೆಯೋ, ಅದರ ದುಪ್ಪಟ್ಟು ರಕ್ತದ ಬೇಡಿಕೆಯಿದೆ. ಇದನ್ನೆಲ್ಲಾ ಪೂರೈಸಬೇಕಾದರೆ, ನಮ್ಮೆಲ್ಲರ ತುಂಬು ಸಹಕಾರ ಅತ್ಯಗತ್ಯ.
ಪ್ರತೀ ಮೂರ್ನಾಲ್ಕು ತಿಂಗಳಿಗೊಮ್ಮೆ ನಾವು ರಕ್ತದಾನ ಮಾಡುವುದರೊಂದಿಗೆ, ಇತರರಿಗೂ ರಕ್ತದಾನ ಮಾಡಲು ಪ್ರೇರೇಪಿಸಬೇಕು. ಮತ್ತು ನಮ್ಮ ನಮ್ಮ ಸೆಕ್ಟರ್, ಶಾಖಾ ಮಟ್ಟದಲ್ಲೂ ಬ್ಲಡ್ ಕ್ಯಾಂಪ್ ಆಯೋಜಿಸಲು ಎಲ್ಲಾ ರೀತಿಯ ಸಹಾಯ-ಸಹಕಾರವನ್ನಿತ್ತು ಸಹಕರಿಸಬೇಕು.
ಪ್ರತೀ ಸಮಯದಲ್ಲೂ ರೋಗಿಗಳಿಗೆ ಅವಶ್ಯಕವಾದ ರಕ್ತದಾನ ಮಾಡಲು ನಮ್ಮಿಂದ ಸಾದ್ಯವಿಲ್ಲ. ಆದರೆ, ಅಂತಹ ಒಂದು ಮಹತ್ಸಾಧನೆಯನ್ನು ಎರಡು ವರ್ಷದಿಂದ ನಿರಂತರವಾಗಿ ಮಾಡುತ್ತಾ ಬರುತ್ತಿರುವ ನಮ್ಮ ನಾಯಕತ್ವದ ಕೈ ಬಲಪಡಿಸುವ ಕೆಲಸವಂತೂ ಖಂಡಿತಾ ನಾವು ಮಾಡಲೇಬೇಕು. ಇಂದಿನಿಂದಲೇ ಆ ಬಗ್ಗೆ ಪ್ರತಿಜ್ಞಾಬದ್ದರಾಗೋಣ.
ಅಲ್ಲಾಹು ಅನುಗ್ರಹಿಸಲಿ, ಆಮೀನ್.
ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.






