ಬಂಟ್ವಾಳ: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪ್ರಾಯೋಗಿಕ ಹಜ್ಜ್ ಕ್ಯಾಂಪ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳರವರ ಅಧ್ಯಕ್ಷತೆಯಲ್ಲಿ ಜೂ.16 ರಂದು ಬಿಸಿರೋಡ್ ಸಾಗರ್ ಆಡಿಟೋರಿಯಂ ನಲ್ಲಿ ನಡೆಯಿತು.
ಎಸ್.ವೈ.ಎಸ್ ರಾಜ್ಯ ನಾಯಕ ಇಸ್ಮಾಈಲ್ ಹಾದಿ ತಂಙಳ್ ಉಜಿರೆರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯ ಸದಸ್ಯ ಇಬ್ರಾಹಿಂ ಮದನಿ ಮಂಚಿ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು.
ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯಾಧ್ಯಕ್ಷ ಬೇಕಲ್ ಉಸ್ತಾದ್, ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿಎಂ ಮುಹಮ್ಮದ್ ಸಖಾಫಿ ಪ್ರಾಯೋಗಿಕ ಹಜ್ಜ್ ತರಗತಿ ಮಂಡಿಸಿದರು. ಕೆಸಿಎಫ್ ದಮ್ಮಾಂ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷ ಮುಹಮ್ಮದ್ ಮಲೆಬೆಟ್ಟು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮೊಂಟೆಪದವು, ರಾಜ್ಯ ನಾಯಕ ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು, ಮುಸ್ತಫಾ ನಈಮಿ ಹಾವೇರಿ, ಮುಸ್ತಫಾ ಮಾಸ್ಟರ್ ಮುಕ್ಕಚೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಜಿಲ್ಲಾ ಉಪಾಧ್ಯಕ್ಷರಾದ ಮುನೀರ್ ಸಖಾಫಿ ಉಳ್ಳಾಲ, ಸಲೀಂ ಹಾಜಿ ಬೈರಿಕಟ್ಟೆ, ಜಿಲ್ಲಾ ಕಾರ್ಯದರ್ಶಿಗಳಾದ ರಶೀದ್ ಹಾಜಿ ವಗ್ಗ, ರಪೀಕ್ ಸುರತ್ಕಲ್, ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಙಳ್ ಉಳ್ಳಾಲ, ತೌಸೀಫ್ ಸಅದಿ ಹರೇಕಳ, ಹಕೀಂ ಕಳಂಜಿಬೈಲ್, ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲ್, ಫೈಝಲ್ ಝುಹ್ರಿ ಕಲ್ಲುಗುಂಡಿ, ಇಕ್ಬಾಲ್ ಮಾಚಾರ್, ನವಾಝ್ ಸಖಾಫಿ ಅಡ್ಯಾರ್‌ಪದವು, ಮುಸ್ತಫಾ ಉರುವಾಲುಪದವು, ಆಬಿದ್ ನಈಮಿ ಕಟ್ಟತ್ತಿಲ, ಸುಹೈಲ್ ಪರಂಗಿಪೇಟೆ ಹಾಗೂ 400 ರಷ್ಟು ಹಜ್ಜಾಜ್ ಗಳು ಉಪಸ್ಥಿತರಿದ್ದರು.
ಪ್ರೋಗ್ರಾಂ ಸಮಿತಿ ಚೇರ್‌ಮೇನ್ ಇಬ್ರಾಹಿಂ ಅಹ್ಸನಿ ಸ್ವಾಗತಿಸಿ, ಕನ್ವೀನರ್ ಸಲೀಂ ಹಾಜಿ ಧನ್ಯವಾದವಿತ್ತರು.