ನ್ಯೂಝಿಲೆಂಡ್, ಮಾ. 21: ಭಯೋತ್ಪಾದನಾ ದಾಳಿಯಲ್ಲಿ ಹತ್ಯೆಯಾದವರ ಗೌರವಸೂಚಕವಾಗಿ ನ್ಯೂಝಿಲೆಂಡಿನ ಪ್ರಧಾನಿ ಜೆಸಿಂತಾ ಆರ್ಡನ್ ಶುಕ್ರವಾರದ ಅಝಾನ್ ಕರೆಯನ್ನು ನ್ಯೂಝಿಲೆಂಡಿನ ಅಧಿಕೃತ ಟೆಲಿವಿಷನ್ ನೆಟ್ ವರ್ಕ್ ಮತ್ತು ರೇಡಿಯೊ ಮೂಲಕ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನ್ಯೂಝಿಲೆಂಡಿನ ಅಧಿಕೃತ ಟಿವಿ ನೆಟ್ವರ್ಕ್ ಟಿವಿ ಎನ್. ಝೆಡ್, ಮತ್ತು ಆರ್ಎನ್ಝೆಡ್ ಮೂಲಕ ಅಝಾನ್ ಪ್ರಸಾರವಾಗಲಿದೆ.
ಅಝಾನ್ ಪ್ರಸಾರಗೊಳ್ಳುವ ಸಂದರ್ಭದಲ್ಲಿ ಮಹಿಳೆಯರು ತಲೆಗೆ ರುಮಾಲು ಹಾಕಿ,ಎಲ್ಲರೂ ಗೌರವ ಸೂಚಕವಾಗಿ ಎದ್ದು ನಿಲ್ಲುವಂತೆಯೂ ತಿಳಿಸಲಾಗಿದೆ. 50 ಅಥವಾ 10 ಶೇಕಡಾ ಕೂಡ ಮುಸ್ಲಿಮರಿಲ್ಲದ ಈ ದೇಶದಲ್ಲಿ ಕೇವಲ 2 ಶೇಕಡಾ ಮುಸ್ಲಿಮರ ದುಃಖದಲ್ಲಿ ಪಾಲ್ಗೊಳ್ಳುವ ಆಡಳಿತವು ಜಗಕ್ಕೇ ಮಾದರಿಯಾಗಿದೆ.
ದೇಶದ ಕೋವಿ ಮತ್ತು ಸುರಕ್ಷೆ ವಿಷಯ ಸಹಿತ ಹಲವು ವಿಷಯಗಳಲ್ಲಿ ಪರಿಹಾರ ಕಂಡು ಹುಡುಕಲಾಗುವುದು ಎಂದು ಪ್ರಧಾನಿ ಹೇಳಿದರು. ಹತ್ಯೆಯಾದವರ ಕುಟುಂಬದವರ ದುಃಖದಲ್ಲಿ ಅವರು ಭಾಗಿಯಾಗಿ ಸಂತೈಸಿದರು. ದೇಶ ಬಿಳೀಯವಾದಿ ಮತ್ತು ಬಲಪಂಥೀಯ ತೀವ್ರವಾದಿಗಳಿಂದ ಮುಕ್ತವಾಗಿಲ್ಲ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಐವತ್ತು ಮಂದಿ ಹತರಾದ ಘಟನೆಯಲ್ಲಿ ಪಾರ್ಲಿಮೆಂಟಿನ ವಿಶೇಷ ಸಮಾವೇಶ ಕರೆಯಲಾಗಿತ್ತು.ಇದುಪವಿತ್ರ ಕುರ್ಆನ್ ಪಾರಾಯಣದೊಂದಿಗೆ ಆರಂಭವಾಗಿತ್ತು.ಎಲ್ಲರಿಗೂ ಶಾಂತಿಯ ಶುಭಾಶಯ ಕೋರಿದ ಪ್ರಧಾನಿ ಬಲಿಪಶುಗಳ ಕುಟುಂಬಗಳಿಗೆ ಬೆಂಬಲ ಸೂಚಿಸಿದರು. ಈ ಹಿಂದೆ ಮುಸ್ಲಿಮರನ್ನು ಸಂತೈಸುವ ನಿಟ್ಟಿನಲ್ಲಿ ಜೆಸಿಂತಾ ಹಿಜಾಬ್ ಧರಿಸಿದ್ದರು.
😍👌
Good
Mash Allah