ರಿಯಾದ್: ನ್ಯಾಷನಲ್ ಕನ್ವರ್ಷನ್ ಕಾರ್ಯಕ್ರಮದ ಭಾಗವಾಗಿ, ಕೆಂಪು ಸಮುದ್ರ ತೀರದಲ್ಲಿ ಘೋಷಿಸಲ್ಪಟ್ಟ ನಗರ ನಿರ್ಮಾಣ ಚಟುವಟಿಕೆಗಳನ್ನು ಸೌದಿ ಅರೇಬಿಯಾ ಶೀಘ್ರದಲ್ಲೇ ಪ್ರಾರಂಭಿಸಲಿದೆ. ಯೋಜನೆಯ ಮೂಲಕ ಐವತ್ತೇಳು ಸಾವಿರ ಉದ್ಯೋಗ ಅವಕಾಶಗಳು ದೇಶದಲ್ಲಿ ಲಭ್ಯವಾಗಲಿದ್ದು, 2022 ರೊಳಗೆ ಮೊದಲ ಹಂತ ಪೂರ್ಣಗೊಳ್ಳಲಿದೆ.
ದೇಶವು ತೈಲೇತರ ಆದಾಯ ಗಳಿಸುವ ಭಾಗವಾಗಿ ಘೋಷಿಸಲ್ಪಟ್ಟ ಅನೇಕ ಮಹತ್ ಯೋಜನೆಗಳಲ್ಲಿ ಕೆಂಪು ಸಮುದ್ರ ಪ್ರವಾಸೋದ್ಯಮವು ಒಂದಾಗಿದೆ. 3800 ಚದರ ಕಿಲೋಮೀಟರುಗಳಲ್ಲಿ ಕಡಲು ಮತ್ತು ತೀರದಲ್ಲಿ ಟೂರಿಸಂ ಸಿಟಿಯನ್ನು ನಿರ್ಮಿಸಲಾಗುವುದು. ಯೋಜನೆಯು ಐಷಾರಾಮಿ ಹೋಟೆಲ್ ಗಳು ಮತ್ತು ರೆಸಾರ್ಟ್ ಗಳನ್ನು ಒಳಗೊಂಡಿದೆ.
ಕೆಂಪು ಸಮುದ್ರದಲ್ಲಿ ಇಪ್ಪತ್ತೆರಡು ದ್ವೀಪಗಳನ್ನು ನಿರ್ಮಿಸಿ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ. ಮೂರು ಸಾವಿರ ಕೊಠಡಿಗಳನ್ನೊಳಗೊಂಡ ಹೋಟೆಲ್ ಗಳು, ರೆಸಾರ್ಟ್ ಗಳು, ವಿಮಾನ ನಿಲ್ದಾಣಗಳು ಮತ್ತು ಮನರಂಜನಾ ಸೌಲಭ್ಯಗಳನ್ನು ಮೊದಲ ಹಂತದಲ್ಲಿ ನಿರ್ಮಿಸಲಾಗುವುದು.
ಇದು 2022ರಲ್ಲಿ ಪೂರ್ಣಗೊಳ್ಳಲಿದ್ದು, ಯೋಜನೆಯು ಸೌದಿ ಸಾರ್ವಜನಿಕ ಹೂಡಿಕೆಯ ನಿಧಿಯಡಿಯಲ್ಲಿದೆ ಜಾರಿಗೆ ಬರಲಿದೆ. ಯೋಜನೆಯು ಪೂರ್ಣಗೊಂಡಲ್ಲಿ, ದೇಶವು ವಾರ್ಷಿಕವಾಗಿ ಒಂದು ದಶಲಕ್ಷ ಐಷಾರಾಮಿ ಪ್ರವಾಸಿಗರನ್ನು ಗುರಿಪಡಿಸುತ್ತಿದೆ. ದೇಶದ ಜಿಡಿಪಿ ಬೆಳವಣಿಗೆಯು ಈ ಮೂಲಕ ವರ್ಷಕ್ಕೆ $ 5.86 ಶತಕೋಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.