janadhvani

Kannada Online News Paper

ಅನಿವಾಸಿಗಳಿಗೆ ಖತಾರ್ ಏರ್ವೇಸ್ ನಲ್ಲಿ ದರ ಕಡಿತ- ಕೇರಳ ಸರ್ಕಾರದಿಂದ ಒಪ್ಪಂದ

ತಿರುವನಂತಪುರಂ:ವಿದೇಶೀ ವಲಸಿಗರಿಗೆ ಖತರ್ ಏರ್‌ವೇಸ್ ‌ನ ದರವನ್ನು ಕಡಿತಗೊಳಿಸುವ ಒಪ್ಪಂದಕ್ಕೆ ಕೇರಳ ರಾಜ್ಯ ಸರಕಾರವು ಸಹಿ ಹಾಕಲಿದೆ.ಇದೇ ರೀತಿ ದರಕಡಿತ ಬಗ್ಗೆ ಕುವೈತ್ ಮತ್ತು ಎಮಿರೇಟ್ಸ್ ಏರ್‌ಲೈನ್ ಕಂಪೆನಿಗಳ ನಡುವೆಯೂ ಮಾತುಕತೆ ಮುಂದುವರಿಯುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ.

ರಜೆಯ ಋತುವಿನಲ್ಲಿ ವಾಯುಯಾನ ದರಗಳಲ್ಲಿನ ಹೆಚ್ಚಳವು ವಲಸಿಗರಲ್ಲಿ ಉಂಟುಮಾಡುವ ಅತಿದೊಡ್ಡ ತೊಂದರೆಗಳಲ್ಲಿ ಒಂದಾಗಿದೆ. ನೋರ್ಕ ರೂಟ್ಸ್ ಈ ತೊಂದರೆಯನ್ನು ನಿಭಾಯಿಸಲು ಈ ತೀರ್ಮಾನ ಕೈಗೊಂಡಿದೆ.

ಪ್ರಸ್ತುತ ಒಮನ್ ಏರ್ ನಲ್ಲಿ ನೋರ್ಕಾ ರೂಟ್ ಐಡಿ ಕಾರ್ಡ್ ಹೊಂದಿರುವ ಅನಿವಾಸಿಗಳು ಮತ್ತು ಕುಟುಂಬದ ಸದಸ್ಯರಿಗೆ ಏಳು ಶೇಕಡಾ ರಿಯಾಯಿತಿ ಲಭ್ಯವಿದೆ. ಕತಾರ್ ಏರ್ ವೇಸ್ ಕೂಡ ಇದೇ ಯೋಜನೆಯನ್ನು ಪ್ರಾರಂಭಿಸಲಿದೆ. ಈ ಬಗ್ಗೆ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದು, ಈ ತಿಂಗಳು ಒಪ್ಪಂದಕ್ಕೆ ಸಹಿ ಹಾಕುವ ಭರವಸೆ ಇದೆ ಎಂದು ಹೇಳಿದರು.

ಕುವೈತ್ ಮತ್ತು ಎಮಿರೇಟ್ಸ್ ಏರ್‌ಲೈನ್ ಕಂಪನಿಗಳೊಂದಿಗೆ ಕೂಡ ಈ ಬಗೆಗಿನ ಮಾತುಕತೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅದೇ ವೇಳೆ ಆಗಸ್ಟ್ 1 ರಿಂದ ಡಿಸೆಂಬರ್ 30 ರ ವರೆಗೆ ಯುಎಇಯಲ್ಲಿ ಘೋಷಿಸಲ್ಪಟ್ಟ ಸಾರ್ವಜನಿಕ ಕ್ಷಮಾಪಣೆಯನ್ನು ಬಳಸಿರುವ ಮುನ್ನೂರಕ್ಕಿಂತಲೂ ಹೆಚ್ಚಿನ ಕೇರಳೀಯರನ್ನು ಉಚಿತವಾಗಿ ಕರೆತರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

error: Content is protected !! Not allowed copy content from janadhvani.com