ಕಾನೂನು ಬಾಹಿರವಾಗಿ ವಾಹನ ಪಾರ್ಕ್:1000 ದಿರ್‌ಹಂ ದಂಡ

ದುಬೈ: ಕಾನೂನು ಬಾಹಿರವಾಗಿ ವಾಹನ ಪಾರ್ಕ್ ಮಾಡಿದರೆ ಇನ್ನು ಮುಂದೆ ಆರು ಬ್ಲ್ಯಾಕ್ ಪಾಯಿಂಟ್ ‌ನೊಂದಿಗೆ 1000 ದಿರ್‌ಹಂ ದಂಡ ವಿಧಿಸಲಾಗುವುದು.
ವ್ಯಕ್ತಿಗಳಿಗಾಗಿ ಪ್ರತ್ಯೇಕ ನಿರ್ಮಿಸಿದ ಪಾರ್ಕಿಂಗ್ ಕೇಂದ್ರಗಳು, ಆ್ಯಂಬುಲೆನ್ಸ್ ಮತ್ತು ಪೊಲೀಸರ ವಾಹನಗಳಿಗಾಗಿ ಮೀಸಲಾದ ಪಾರ್ಕಿಂಗ್ ಸ್ಥಳಗಳು, ಅಗ್ನಿಶಾಮಕ ಯಂತ್ರಗಳನ್ನು ಸ್ಥಾಪಿಸಲಾದ ವಲಯಗಳು, ಅಸಹಾಯಕರಿಗಾಗಿ ಮೀಸಲಾದ ಪಾರ್ಕಿಂಗ್ ಕೇಂದ್ರಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ದಂಡ ವಿಧಿಸಲಾಗುವುದು.

ಯುಎಇ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಾಧಿಕಾರಿಯೂ ಆದ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ಕಳೆದ ವರ್ಷ ಪ್ರತ್ಯೇಕ ಸೇವೆಯ ಅಗತ್ಯವಿರುವವರಿಗಾಗಿ ಹೆಚ್ಚಿನ ಸೇವೆಗಳನ್ನು ಪ್ರಾರಂಭಿಸುಂತೆ ಆದೇಶ ನೀಡಿದ್ದರು. ಇತರರಿಗಾಗಿ ಮೀಸಲಿರಿಸಲಾದ ಪಾರ್ಕಿಂಗ್ ಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಅಪರಾಧವಾಗಿದೆ.

ಅಸಹಾಯಕರಿಗಾಗಿ ಮೀಸಲಾದ ಪಾರ್ಕಿಂಗ್ ಏರಿಯಾಗಳಲ್ಲಿ ವಾಹನ ನಿಲ್ಲಿಸುವುದರಿಂದ ಅವರ ಯಾತ್ರೆ ಮೊಟಕುಗೊಳ್ಳುವ ಸಂಭವವಿದೆ ಎಂದು ರಾಖ್ ಪೊಲೀಸ್ ಸೆಂಟ್ರಲ್ ಆಪರೇಷನ್ಸ್ ಡಯರಕ್ಟರ್ ಜನರಲ್ ಬ್ರಿಗೇಡಿಯರ್ ಡಾ. ಮುಹಮ್ಮದ್ ಸ‌ಈದ್ ಅಲ್ ಉಮೈದಿ ತಿಳಿಸಿದರು. ಯುಎಇ ಯಾದ್ಯಂತ ಕಾನೂನು ಬಾಹಿರವಾಗಿ ಪಾರ್ಕಿಂಗ್ ಮಾಡುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಳೆದ ವರ್ಷ ಪ್ರಾರಂಭ ಹಂತದಲ್ಲಿ 642 ಮಂದಿಗೆ ಶಾರ್ಜಾ ಪೊಲೀಸರು ದಂಡ ವಿಧಿಸಿದ್ದರು.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!